Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | 29 ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ಹಾಲು ಒಕ್ಕೂಟದ 500 ನಂದಿನಿ ಮಿಲ್ಕ್ ಪಾರ್ಲರ್ ಗಳನ್ನು ಏಕಕಾಲದಲ್ಲಿ ಕಲ್ಬುರ್ಗಿಯಲ್ಲಿ ಸಾಂಕೇತಿಕವಾಗಿ ಆನ್‍ಲೈನ್ ಮೂಲಕ ಉದ್ಗಾಟಿಸಿದ ಬೆನ್ನಲ್ಲಿಯೇ ಜಿಲ್ಲೆಯಲ್ಲಿ ಶಿಮೂಲ್‍ನಿಂದ 29 ನಂದಿನಿ ಮಿಲ್ಕ್ ಪಾರ್ಲರ್‍ಗಳನ್ನು ಬುಧವಾರ ಉದ್ಗಾಟಿಸಲಾಯಿತು.

ಚಿತ್ರದುರ್ಗದ ಐ.ಯು.ಡಿ.ಪಿ.ಲೇಔಟ್, ಸಾಸಲುಹಳ್ಳ, ಹೊಳಲ್ಕೆರೆ, ತಾಳ್ಯ, ಹೆಚ್.ಡಿ.ಪುರ, ಮಾಡದಕೆರೆ, ಧರ್ಮಪುರ, ಹಿರಿಯೂರು, ನೇರಲಗುಂಟೆ ಸೇರಿದಂತೆ 29 ಕಡೆ ನಂದಿನಿ ಮಿಲ್ಕ್ ಪಾರ್ಲರ್‍ಗಳನ್ನು ಶಿಮುಲ್ ನಿರ್ದೇಶಕರುಗಳಾದ ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರ್, ಬಿ.ಸಿ.ಸಂಜೀವಮೂರ್ತಿ ಇವರುಗಳು ಉದ್ಗಾಟಿಸಿ ನಂದಿನಿ ಮಿಲ್ಕ್ ಪಾರ್ಲರ್‍ಗಳಲ್ಲಿ ಹಾಲಿನ ಉತ್ಪನ್ನಗಳು ಹಾಗೂ ಸಹಿ ತಿನಿಸುಗಳು ದೊರೆಯುತ್ತದೆಂದು ಹೇಳಿದರು.

ಬಿ.ಆರ್.ರವಿಕುಮಾರ್, ಚಿತ್ರದುರ್ಗ ಜಿಲ್ಲೆ ಮಾರುಕಟ್ಟೆ ಉಸ್ತುವಾರಿಗಳಾದ ಬಿ.ಎಂ.ಹನುಮಂತಪ್ಪ, ಎಂ.ಪುಟ್ಟರಾಜು, ಜಿ.ರವಿಚಂದ್ರ, ಇರ್ಫಾನ್ ಅಲಿಖಾನ್ ಅಫ್ರಿದಿ, ಕೆ.ಎನ್.ಆಕಾಶ್, ಎ.ರಂಗಸ್ವಾಮಿ, ಎಸ್.ಶ್ರೀಧರ್ ಹಾಗೂ ಪಾರ್ಲರ್ ಲೈಸೆನ್ಸ್‍ದಾರರು ಉದ್ಗಾಟನೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...