ಚಿತ್ರದುರ್ಗ | ಮಳೆಗೆ ಮನೆ ಕುಸಿತ

1 Min Read

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 18 : ತಾಲ್ಲೂಕಿನ  ಬೊಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ವಾಸದ ಮನೆಯೊಂದು ಶನಿವಾರ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ.

ಬೊಮ್ಮೇನಹಳ್ಳಿ ನಿವಾಸಿ ಶ್ರೀಮತಿ ಕೊಲ್ಲಮ್ಮ ಚೌಡಪ್ಪ ಎಂಬುವರ ಮನೆ ಶನಿವಾರ ಸುರಿದ ಮಳೆಗೆ ಸಂಪೂರ್ಣವಾಗಿ ನೆಲೆಸಮವಾಗಿದೆ. ಇದರಿಂದಾಗಿ ಮನೆಯೊಡತಿ ಕಂಗಾಲಾಗಿದ್ದಾರೆ. ಇಷ್ಟೇ ಅಲ್ಲದೇ ಗ್ರಾಮದಲ್ಲಿ ಇನ್ನೂ ಐದು ಮನೆಗಳ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ.

ವಿಷಯ ತಿಳಿದ ನಂತರ ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಮಲತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಈ ದುರ್ಘಟನೆ ನಡೆಯಬಾರದಾಗಿತ್ತು ನಡೆದಿದೆ. ಶನಿವಾರ ರಾತ್ರಿ ವಿಪರೀತ ಮಳೆ ಬಂದು ಮನೆಗಳು ಬಿದ್ದಿವೆ. ಈ ವಿಷಯವನ್ನು ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ ಅವರ ಗಮನಕ್ಕೂ ತರಲಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಒದಗಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳೆಗೆ ಸೂಚಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ ಎನ್.,  ಗೋಪಿನಾಥ್, ವೆಂಕಟೇಶ್   ಶಿವಕುಮಾರ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *