in ,

ಚಿತ್ರದುರ್ಗ : ಮೇ.10 ಮತ್ತು 13 ರಂದು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಮಾಹಿತಿ ಇಲ್ಲಿದೆ

suddione whatsapp group join

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಮೇ.08) : ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.10 ರಂದು ನಡೆಯಲಿರುವ ಮತದಾನ ಹಾಗೂ ಮೇ.13 ರ ಮತ ಎಣಿಕೆ ಕಾರ್ಯಕ್ಕಾಗಿ 5 ಡಿಎಸ್‍ಪಿ(ಉಪ ಪೊಲೀಸ್ ವರಿಷ್ಠಾಧಿಕಾರಿ ), 18 ಸಿಪಿಐ (ವೃತ್ತ ನಿರೀಕ್ಷರು), 57 ಪಿ.ಎಸ್.ಐ (ಪೊಲೀಸ್ ಸಬ್  ಇನ್ಸ್‍ಪೆಕ್ಟರ್), 134 ಎ.ಎಸ್.ಐ(ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್), 955 ಪಿ.ಸಿ.(ಕಾನ್ಸಟೇಬಲ್), 600 ಗೃಹರಕ್ಷರನ್ನು ಚಿತ್ರದುರ್ಗ ಜಿಲ್ಲೆಯಿಂದ ನೇಮಿಸಲಾಗಿದೆ.

1 ಡಿಎಸ್‍ಪಿ, 5 ಸಿಪಿಐ, 4 ಪಿ.ಎಸ್.ಐ, 61 ಎ.ಎಸ್.ಐ , 268ಪಿ.ಸಿ, 100 ಗೃಹರಕ್ಷರನ್ನು ಹೊರ ಜಿಲ್ಲೆಯಿಂದ ನೇಮಿಸಲಾಗಿದೆ.

ಇದರೊಂದಿಗೆ 14 ಸಿಎಪಿಎಫ್ (ಕೇಂದ್ರ ಸಶಸ್ತ್ರ ದಳ) ಹಾಗೂ 6 ಕೆ.ಎಸ್.ಆರ್.ಪಿ (ಸಶಸ್ತ್ರ ಮೀಸಲು ಪಡೆ) ತುಕಡಿಗಳನ್ನು ಬಂದೋಬಸ್ತ್ ಕಾರ್ಯ ನಿಯೋಜಿಸಲಾಗಿದೆ.

ಮೇ.13 ರಂದು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟದಲ್ಲಿ ಜರುಗುವ ಮತ ಎಣಿಕೆ ಕಾರ್ಯಕ್ಕೆ 1 ಡಿಎಸ್‍ಪಿ, 1 ಸಿಪಿಐ, 4 ಪಿ.ಎಸ್.ಐ, 9 ಎಸ್.ಎಸ್.ಐ, 17 ಹೆಚ್.ಸಿ (ಹೆಡ್ ಕಾನ್ಸ್ ಟೇಬಲ್), 20 ಪಿ.ಸಿ ಹಾಗೂ 2 ಸಿಎಪಿಎಫ್ ಹಾಗೂ 1 ಕೆ.ಎಸ್.ಆರ್.ಪಿ, 2 ಡಿಎಆರ್(ಜಿಲ್ಲಾ ಸಶಸ್ತ್ರ ಪಡೆ) ತುಕಡಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಮಾಹಿತಿ ನೀಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ ಎಸ್‍ಎಸ್‍ಎಲ್‍ಸಿ ಫಲಿತಾಂಶ : ದಯಾನಿಧಿ ಎಸ್.ಪಿ ಜಿಲ್ಲಾ ಟಾಪರ್

ಈ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಧನಾಗಮನ