ಚಿತ್ರದುರ್ಗದಲ್ಲಿ ಮುಖ್ಯಪೇದೆಗೆ ಲಘು ಹೃದಯಾಘಾತ : ಅಪಾಯದಿಂದ ರಮೇಶ್ ಪಾರು..!

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 19 : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾಕಷ್ಟು ಅನಾಹುತಗಳು ನಡೆದು ಹೋಗಿವೆ. ವಯಸ್ಸಿನ ಮಿತಿಯೇ ಇಲ್ಲದೇ ಹೃದಯಾಘಾತದಂತ ಘಟನೆಗಳು ನಡೆಯುತ್ತಿವೆ. ಮುಖ್ಯವಾಗಿ ನಾವೂ ತಿನ್ನುವ ಆಹಾರ, ದೇಹಕ್ಕೆ ಅತಿಯಾದ ವ್ಯಾಯಾಮ, ಒತ್ತಡದಿಂದ ಜೀವನ ಕಳೆಯುತ್ತಿರುವುದೇ ಆಗಿದೆ‌‌. ಅದರಲ್ಲೂ ಪೊಲೀಸ್ ಕೆಲಸದಲ್ಲಿರುವವರದ್ದು ಇನ್ನು ಹೆಚ್ಚಿನ ಒತ್ತಡದಲ್ಲಿರುತ್ತಾರೆ. ಕೇಸುಗಳು, ಜನರ ರಕ್ಷಣೆ ಅಂತ ಓಡಾಟ ಇದ್ದೆ ಇರುತ್ತದೆ. ಧಣಿದ ದೇಹಕ್ಕೆ ಆರಾಮು ಇಲ್ಲದೆ ಹೋದಾಗ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತದೆ. ಹೀಗಾಗಿ ಎಚ್ಚರದಿಂದ ಇರಬೇಕಾಗುತ್ತದೆ. ಚಿತ್ರದುರ್ಗದ ಮುಖ್ಯ ಪೇದೆ ರಮೇಶ್ ಅವರ ಅದೃಷ್ಟ ಚೆನ್ನಾಗಿತ್ತು ಎನಿಸುತ್ತದೆ. ಯಾವುದೇ ಅಪಾಯವಿಲ್ಲದೆ ಹೃದಯಾಘಾತದಂತ ಸಮಸ್ಯೆಯಿಂದ ಪಾರಾಗಿದ್ದಾರೆ.

ಹೌದು ಮುಖ್ಯಪೇದೆ ರಮೇಶ್ ಅವರಿಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಸದ್ಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ರೀತಿಯ ತೊಂದರೆಯಾಗಿಲ್ಲ.

ರಮೇಶ್ ಅವರು ಚಿತ್ರದುರ್ಗದ ಸಶಸ್ತ್ರ ಮೀಸಲು ಪಡೆಯ ಮುಖ್ಯ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದಾಗ ಲಘು ಹೃದಯಾಘಾತವಾಗಿದೆ. ತಕ್ಷಣ ರಮೇಶ್ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆಗೆ ಸ್ಪಂದಿಸಿದ್ದು, ಯಾವುದೇ ಸಮಸ್ಯೆ ಆಗದಂತೆ ಬದುಕುಳಿದಿದ್ದಾರೆ. ಆಸ್ಪತ್ರೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಎಸ್ಪಿ ರಂಜಿತ್ ಬಂಡಾರು ಅವರು ಆಸ್ಪತ್ರೆಗೆ ಭೇಟಿ ನೀಡಿ‌, ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ಮುಖ್ಯಪೇದೆ ರಮೇಶ್ ಗೆ ಆತ್ಮಸ್ಥೈರ್ಯ ಹೇಳಿದ್ದು, ಎಸ್ಪಿ ರಂಜಿತ್ ಬಂಡಾರುಗೆ ಡಿಎಆರ್ ಡಿವೈಎಸ್ಪಿ ಗಣೇಶ್ ಸಾಥ್ ನೀಡಿದ್ದಾರೆ. ಆದಷ್ಟು ಬೇಗ ಆರೋಗ್ಯ ಸುಧಾರಿಸಲಿ ಎಂದೇ ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *