ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.14 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹೇಮಾವತಿ ಅಮ್ಮನವರ ಕನಸಿನ ಕೂಸು ವಾತ್ಸಲ್ಯ ಮನೆಯನ್ನು ಎನ್.ಬಳಿಗಟ್ಟೆ ಗ್ರಾಮದಲ್ಲಿ ರತ್ನಮ್ಮ ಹಾಗೂ ರಾಮಪ್ಪ ದಂಪತಿಗಳಿಗೆ ವಿತರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ರತ್ನಮ್ಮ ರಾಮಪ್ಪ ದಂಪತಿಗಳಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡುತ್ತ ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಅತ್ಯಂತ ಕಡು ಬಡವರನ್ನು ಗುರುತಿಸಿ ಡಾ.ಡಿ.ವೀರೇಂದ್ರ ಹೆಗಡೆರವರು ವಾತ್ಸಲ್ಯ ಮನೆಗಳನ್ನು ನಿರ್ಮಿಸಿ ಸೂರು ಕಲ್ಪಿಸುತ್ತಿದ್ದಾರಲ್ಲದೆ ಪ್ರತಿ ತಿಂಗಳು ಮಾಶಾಸನವನ್ನು ನೀಡುತ್ತಿದ್ದಾರೆಂದು ಹೇಳಿದರು.
ಯೋಜನಾಧಿಕಾರಿ ಪ್ರವೀಣ್ ಎ.ಜೆ. ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ವಲಯದ ಜ್ಞಾನವಿಕಾಸ ಸಮನ್ವಯಾಧಿಕಾರಿ ವಾತ್ಸಲ್ಯ ಮನೆ ವಿತರಣೆ ಕಾರ್ಯಕ್ರಮದಲ್ಲಿ ಹಾಜರಿದ್ದರು.