ಸುದ್ದಿಒನ್, ಚಿತ್ರದುರ್ಗ. ಏ.02 : ಮಾರ್ಚ್ 30 ರಂದು ನಡೆದ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಉಳಿದ ಅವದಿಗೆ ಅಧ್ಯಕ್ಷರಾಗಿ ಹೆಚ್.ಎಂ. ದ್ಯಾಮಣ್ಣ ಹಾಗೂ ಉಪಾಧ್ಯಕ್ಷರಾಗಿ ಹೆಚ್.ವಿ. ಪ್ರತಾಪ್ ಸಿಂಹ ಅವರು ಅವಿರೊಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ರಾಮರೆಡ್ಡಿ, ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರುಗಳಾದ ಜಿಂಕಲು ಬಸವರಾಜ್, ಜೆ.ಪ್ರಕಾಶ್, ಸಂಜೀವಮೂರ್ತಿ, ಮಾತೃಶ್ರೀ ಎನ್. ಮಂಜುನಾಥ್, ಜಿ.ಈ.ಅಜ್ಜಪ್ಪ, ಕೆ.ಹೆಚ್.ಜಗನ್ನಾಥ್, ಟಿ.ಮಹಂತೇಶ್, ಹಾಗೂ ಮಾರಾಟಾಧಿಕಾರಿ ಮತ್ತು ಚುನಾವಣಾಧಿಕಾರಿ ಕೆ. ಕೃಷ್ಣಮೂರ್ತಿ, ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಾಟೀಲ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.