ಚಿತ್ರದುರ್ಗ : ಜೋಗಿಮಟ್ಟಿ ರಸ್ತೆಯಲ್ಲಿರುವ ಗುರುಕರಿಬಸವೇಶ್ವರಸ್ವಾಮಿಯ ಗದ್ದಿಗೆ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಎಳನೀರು, ಬಾಳೆದಿಂಡು, ಹೊಂಬಾಳೆ, ವಿವಿಧ ಬಗೆಯ ಹೂವು ಹಾಗೂ ಹಾರಗಳಿಂದ ರಥವನ್ನು ಅಲಂಕರಿಸಲಾಗಿತ್ತು.
ರಥವನ್ನು ಎಳೆಯುವಾಗ ನೆರೆದಿದ್ದ ಭಕ್ತರು ಬಾಳೆಹಣ್ಣು, ಮೆಣಸು ಮಂಡಕ್ಕಿಯನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.
ದೇವಸ್ಥಾನದಿಂದ ಹಿಡಿದು ರಥ ಸಾಗುವತ್ತ
ಭಕ್ತರು ರಸ್ತೆಗೆ ನೀರು ಹಾಕಿ ಶ್ರದ್ದಾ ಭಕ್ತಿ ಮೆರೆದರು. ಸುಡುವ ಬಿಸಿಲನ್ನು ಲೆಕ್ಕಿಸದೆ ಮಹಿಳೆ ಮಕ್ಕಳು ವೃದ್ದರು ಕೂಡ ರಥೋತ್ಸವವನ್ನು ಕಣ್ತುಂಬಿಕೊಂಡರು.
ಗುರುಕರಿಬಸವೇಶ್ವರಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ನಗರಸಭೆ ಸದಸ್ಯೆ ಆರ್.ನಾಗಮ್ಮ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ರಾಜು, ಓಂಕಾರಮೂರ್ತಿ, ಮೋಹನ್‍ಕುಮಾರ್, ರಂಗಪ್ಪ, ಸಿದ್ದೇಶ್, ಮೂರ್ತಿ, ನಗರಸಭೆ ಮಾಜಿ ಸದಸ್ಯ ಜೆ.ಮಹೇಶ್ ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.