ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ನಗರದ ಚಳ್ಳಕೆರೆ ರಸ್ತೆಯಲ್ಲಿ ಶ್ರೀ ಸಾಯಿ ಸಂಕಲ್ಪ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಜೃಂಭಣೆಯಿಂದ ಗುರುಪೂರ್ಣಿಮಾ (Guru Purnima 2024) ಮಹೋತ್ಸವ ನಡೆಯಿತು.
ಗುರು ಪೌರ್ಣಮಿ ಅಂಗವಾಗಿ ಸಾಯಿಮಂದಿರಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀ ಬಾಬಾ ಅವರಿಗೆ ಪಂಚಾಮೃತ ಅಭಿಷೇಕ, ಭಜನೆ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಸಂಜೆ 6 ಗಂಟೆಗೆ ಆರತಿ, 8 ಗಂಟೆಗೆ ಶೇಜ ಆರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಗುರು ಪೌರ್ಣಮಿ ಮಹೋತ್ಸವ ಅಂಗವಾಗಿ ಸಾಯಿ ಬಾಬಾ ಮಂದಿರದಲ್ಲಿ ವಿವಿಧ ಬಣ್ಣದ ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಾವಿರಾರು ಭಕ್ತರು ಗುರು ಪೌರ್ಣಮಿ ಮಹೋತ್ಸವ ಪೂಜೆಯಲ್ಲಿ ಪಾಲ್ಗೊಂಡು ಬಾಬಾರ ದರ್ಶನ ಪಡೆದರು. ನೆರೆದಿದ್ದ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಸಾಯಿ ಸಂಕಲ್ಪ ಸೇವಾ ಸಮಿತಿಯ ಅಧ್ಯಕ್ಷರಾದ ತೇಜಸ್ವಿ, ಉಪಾಧ್ಯಕ್ಷರಾದ ಜಿ.ಟಿ. ಸುರೇಶ್, ಕಾರ್ಯದರ್ಶಿ ನಯನ, ಖಜಾಂಚಿ ವಿಶ್ವನಾಥ, ಸೋಮನಾಥ ಶೆಟ್ಟಿ, ಲಕ್ಷ್ಮಣ, ಚೇತನ್, ಸೋಮೇಗೌಡ, ಶ್ರೀಮತಿ ಶೈಲಜಾ ರೆಡ್ಡಿ, ಸೌಮ್ಯಾ ಸತ್ಯನಾರಾಯಣ, ಕೃಷ್ಣ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.