Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಗ್ರಾಮ ಪಂಚಾಯಿತಿ ಉಪಚುನಾವಣೆ: ವೇಳಾಪಟ್ಟಿ ಪ್ರಕಟ

Facebook
Twitter
Telegram
WhatsApp

ಚಿತ್ರದುರ್ಗ. ನ.06: ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

 

ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. 2024ರ ನ.06 ರಿಂದ 26 ರವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುತ್ತದೆ. ನ.06ರಂದು ಬುಧವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ನ.12ರಂದು ಮಂಗಳವಾರ ನಾಮ ಪತ್ರ ಸಲ್ಲಿಸಲು ಕೊನೆಯ ದಿನ. ನ.13ರಂದು ಬುಧವಾರ ನಾಮಪತ್ರಗಳ ಪರಿಶೀಲನೆ, ನ.15ರಂದು ಶುಕ್ರವಾರ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ನ.23ರಂದು ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಸಲಾಗುವುದು. ಮರು ಮತದಾನ ಅವಶ್ಯವಿದ್ದರೆ ನ.25ರಂದು ಸೋಮವಾರ ನಡೆಸಲಾಗುವುದು. ನ.26ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ನ.26ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

 

ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ.

ಮೊಳಕಾಲ್ಮುರು ತಾಲ್ಲೂಕಿನ ಜಹಗೀರ್ ಬುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಹೊಸಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೋಬನಹಳ್ಳಿ-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕೊಂಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡ್ಲಹಳ್ಳಿ-5 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ ಮಹಿಳೆ),

 

ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯ ಅಬ್ಬೇನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ ಮಹಿಳೆ), ಚೌಳಕೆರೆ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ), ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾತ್ರಿಕೇನಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ಮೈಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ದೊಡ್ಡಚೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಚೆಲ್ಲೂರು-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಗಲಗಟ್ಟೆ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕ್ಯಾತಗೊಂಡನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ),

 

ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಭರಮಸಾಗರ ಗ್ರಾಮ  ಪಂಚಾಯಿತಿ ವ್ಯಾಪ್ತಿಯ ಭರಮಸಾಗರ-4 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಹಿರೇಗುಂಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಜಂಪಣ್ಣನಾಯಕನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಪಣ್ಣನಾಯಕನಕೋಟೆ-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ),

 

ಹಿರಿಯೂರು ತಾಲ್ಲೂಕಿನ ಮದಕರಿನಾಯಕನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಕರಿನಾಯಕನ ಕೋಟೆ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಧರ್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಬ”), ಮೇಟಿಕುರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಹಳ್ಳದ ವಡ್ಡರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಹೊಸಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದಿಗನಡು ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಹಳ್ಳಿ-2 ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ),

 

ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಾಭೋವಿಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಬೆಲಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಯನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀರಾಂಪುರ-2 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಹೆಗ್ಗೆರೆ ಗ್ರಾಮ  ಪಂಚಾಯಿತಿ ವ್ಯಾಪ್ತಿಯ ಓಬಳಾಪುರ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಅ”),

ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಕಲವಟ್ಟಿಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಅ”-ಮಹಿಳೆ) ಹಾಗೂ 1 ಸದಸ್ಯ ಸ್ಥಾನ (ಸಾಮಾನ್ಯ) ವರ್ಗಕ್ಕೆ ಮೀಸಲಾಗಿದೆ. ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಯಾಗಳಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ)ಕ್ಕೆ ಉಪ ಚುನಾವಣೆ ನಿಗಧಿಯಾಗಿದ್ದು, ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಭದ್ರಾ ಮೇಲ್ದಂಡೆಗೆ ಯೋಜನೆ : ಕೇಂದ್ರದ ಅನುದಾನ ಖೋತಾ : ಜೆ.ಯಾದವರೆಡ್ಡಿ

ಸುದ್ದಿಒನ್, ಚಿತ್ರದುರ್ಗ, ನವಂಬರ್. 06 : ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆಗೆ ಯೋಜನೆಗೆ ಕೇಂದ್ರದ ಘೋಷಿತ 5300 ಕೋಟಿ ರು ಅನುದಾನದಲ್ಲಿ 1754 ಕೋಟಿ ರು ಖೋತ

ನವೆಂಬರ್ 13ರಂದು ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ: ಅರ್ಜಿ ಆಹ್ವಾನ

ಚಿತ್ರದುರ್ಗ. ನ.06: ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ – 2025 ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತುಹೋದ

ಚಿತ್ರದುರ್ಗ | ಗ್ರಾಮ ಪಂಚಾಯಿತಿ ಉಪಚುನಾವಣೆ: ವೇಳಾಪಟ್ಟಿ ಪ್ರಕಟ

ಚಿತ್ರದುರ್ಗ. ನ.06: ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.   ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. 2024ರ ನ.06 ರಿಂದ 26

error: Content is protected !!