Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯಮಟ್ಟದ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಚಿತ್ರದುರ್ಗದ ಸರ್ಕಾರಿ ಶಾಲೆಯ ಮಕ್ಕಳು ಚಾಂಪಿಯನ್ : ರಾಷ್ಟ್ರ ಮಟ್ಟಕ್ಕೆ, ಡಿಡಿಪಿಐ ಸಂತಸ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ ನವೆಂಬರ್. 10 : ಚಿತ್ರದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದಾವಣಗೆರೆಯಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಜಯಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಬರುವ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ತಿಳಿಸಿದ್ದಾರೆ.

ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಮಕ್ಕಳಿಗೆ ಶುಭ ಕೋರಲು ವಿ.ಪಿ. ಬಡಾವಣೆಯ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿ, ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಬೆಂಗಳೂರು ವಿಭಾಗಮಟ್ಟ ಹಾಗೂ ರಾಜ್ಯಮಟ್ಟದ ಹ್ಯಾಂಡ್‍ಬಾಲ್‍ನಲ್ಲಿ ಚಿತ್ರದುರ್ಗ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಂತಿಮವಾಗಿ ಚಿತ್ರದುರ್ಗ ಜಿಲ್ಲೆಯ 9 ಕ್ರೀಡಾಪಟುಗಳು ಡಿಸೆಂಬರ್ 2ನೇ ವಾರದಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ನಗರದ ವಿ.ಪಿ. ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಜ್ವಲ್.ಎನ್, ದಿಗಂತ್‍ಕುಮಾರ್.ಎನ್, ಆದೀಶ್.ಎಸ್, ಪುಷ್ಪವತಿ.ಎಸ್, ಚಿನ್ಮೂಲಾದ್ರಿ ಪ್ರೌಢಶಾಲೆಯ ತೇಜಸ್ವಿನಿ.ಎಸ್, ಮಂಜುನಾಥ.ಆರ್, ಮೊಳಕಾಲ್ಮೂರಿನ ಕಿತ್ತೂರುರಾಣಿ ಚನ್ನಮ್ಮ ಶಾಲೆಯ ಸುನಿತ.ಡಿ.ಎಂ, ಪಲ್ಲವಿ, ಚಳ್ಳಕೆರೆ ಮೊರಾರ್ಜಿ ದೇಸಾಯಿ ಶಾಲೆಯ ಸುನೀಲ್.ಎ ಆಯ್ಕೆಯಾಗಿದ್ದು, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೆ.ಹೆಚ್.ಶಿವರಾಂ ಬಾಲಕರ ವಿಭಾಗದ ರಾಜ್ಯ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ ಎಂದರು.

ಮಕ್ಕಳ ಸಾಧನೆಗೆ ತೀವ್ರ ಸಂತಸ ವ್ಯಕ್ತಪಡಿಸಿರುವ ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಅವರು, ನಗರ, ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದ ದೂರದ ಈ ಪಯಣದಲ್ಲಿ ಯಶಸ್ಸನ್ನು ಸಾಧಿಸಿ, ಜಿಲ್ಲೆಯ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ನಿಜಕ್ಕೂ ಅದ್ಬುತ ಸಾಧನೆಯಾಗಿದೆ. ನಮ್ಮ ಜಿಲ್ಲೆಯ ಕ್ರೀಡಾಪಟುಗಳ ಈ ಸಾಧನೆಯ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕ ಕೆ.ಹೆಚ್.ಶಿವರಾಮ್ ಅವರ ಅಪರಿಮಿತ ಪರಿಶ್ರಮವಿದೆ.

ಜಿಲ್ಲೆ ಮತ್ತು ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಇವರು ಮಾದರಿಯಾಗಿದ್ದಾರೆ. 22 ವರ್ಷಗಳಿಂದ ಸತತವಾಗಿ ಹ್ಯಾಂಡ್‍ಬಾಲ್‍ನಲ್ಲಿ ಒಂದಲ್ಲಾ ಒಂದು ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಜಿಲ್ಲೆಯ ಕ್ರೀಡಾಪಟುಗಳು ಆಯ್ಕೆಯಾಗುತ್ತಿರುವುದು ಇವರ ಪರಿಶ್ರಮಕ್ಕೆ ಒಂದು ಉದಾಹರಣೆ.

ಕಳೆದ ಬಾರಿ 14 ಮತ್ತು 17 ವರ್ಷದ ವಯೋಮಿತ ಬಾಲಕ ಮತ್ತು ಬಾಲಕಿಯರ 4 ವಿಭಾಗದಲ್ಲಿ ಚಾಂಪಿಯನ್ ಆಗಿ 14 ಜನ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಹ್ಯಾಂಡ್‍ಬಾಲ್‍ಗೆ ಆಯ್ಕೆಯಾಗಿದ್ದು ಗಮನಾರ್ಹವಾಗಿದೆ. ಹ್ಯಾಂಡ್‍ಬಾಲ್ ವಿಭಾಗದಿಂದ 18 ಕ್ರೀಡಾಪಟುಗಳು ತಲಾ ರೂ.01 ಲಕ್ಷ ಕ್ರೀಡಾ ವಿದ್ಯಾರ್ಥಿವೇತನ ಪಡೆದಿದ್ದು, ಈ ಬಾರಿ 12  ಕ್ರೀಡಾಪಟು ತಲಾ ರೂ.01 ಲಕ್ಷಗಳನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪಡೆಯಲು ಅರ್ಹರಾಗಿರುತ್ತಾರೆ.

ಈ ಸಾಧನೆಗೆ ಪ್ರೇರಣೆ, ದಾನಿಗಳಿಂದ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ಕೊಡಿಸಿ, ಅತ್ಯುತ್ತಮ ಹ್ಯಾಂಡಬಾಲ್ ಅಂಕಣಗಳನ್ನು ಶಾಲಾ ಮೈದಾನದಲ್ಲಿ ನಿರ್ಮಿಸಿ, ಶಾಶ್ವತ ಪೆಂಡ್‍ಲೈಟ್‍ನ್ನು ಅಂಕಣಕ್ಕೆ ಅಳವಡಿಸಿ ಸತತವಾಗಿ ತರಬೇತಿಯನ್ನು ನೀಡಿದ್ದರ ಪ್ರತಿಫಲವಾಗಿ ನಮ್ಮ ಕ್ರೀಡಾಪಟುಗಳು ಈ ಸಾಧನೆಗೈದ್ದಾರೆ. ದೆಹಲಿಗೆ ಹೊರಡುವ ಮುನ್ನಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೆ ಚಿತ್ರದುರ್ಗ ಜಿಲ್ಲಾ ವತಿಯಿಂದ ಪೌರ ಸನ್ಮಾನವನ್ನು ಮಾಡಿ ರಾಷ್ಟ್ರಮಟ್ಟಕ್ಕೆ ಕಳುಹಿಸಿಕೊಡಲಾಗುವುದು.

ಹಾಗೆಯೇ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ರಾಜ್ಯ ತಂಡಕ್ಕೆ ಇದೇ ಮೈದಾನದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲು ಚಿಂತನೆ ಮಾಡಲಾಗಿದೆ. ತರಬೇತಿ ಶಿಬಿರಕ್ಕೆ ಕ್ರೀಡೋಪಕರಣ, ಮೈದಾನದ ಸಿದ್ಧತೆ ಹಾಗೂ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ, ಹಾಲು, ಮೊಟ್ಟೆ, ಹಣ್ಣು ಹಾಗೂ ಇನ್ನೀತರೆ ವ್ಯವಸ್ಥೆಗಾಗಿ ನಗರಸಭೆಯ ಶೇ.2ರ ಅನುದಾನದಲ್ಲಿ ರೂ.1ಲಕ್ಷವನ್ನು ನೀಡಲು ಸಹ ಕೋರಲಾಗುವುದು. ಈ ಅದ್ಬುತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ, ಸಹಕರಿಸಿದ ಪೋಷಕರಿಗೆ ಶಾಲೆಯ ಶಿಕ್ಷಕರಿಗೆ ಚಿತ್ರದುರ್ಗ ಜಿಲ್ಲೆಯ ಸಮಸ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಹಾಗೆಯೇ ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿಯೂ ಸಹ ಅತ್ಯುತ್ತಮ ಸಾಧನೆ ಮೂಡಿ ಬರಲಿ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಶುಭ ಹಾರೈಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ರವಿಶಂಕರ್‍ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ನಾಗಭೂಷಣ್, ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಎಂ.ಹೆಚ್.ಜಯಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಹೆಚ್.ಶಿವರಾಮ್, ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆಯ ಸಿ.ಎಸ್.ಪ್ರೇಮಾನಂದ ಇನ್ನಿತರರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ : ಎಸ್ಐಟಿ ಮುಂದೆ ಹಾಜರಾಗುವುದು ಉತ್ತಮ ಎಂದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಇನ್ನು ಪತ್ತೆಯಾಗಿಲ್ಲ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಎದುರಾದಾಗ, ಆರೋಪಿ ಆಗಿದ್ದವನು ಆರೋಪವನ್ನು ಎದುರಿಸಬೇಕು. ಕಾನೂನು ಹೋರಾಟವನ್ನು ಮಾಡಬೇಕು ಎಂದಿದ್ದಾರೆ.   ಆರೋಪವೆಂಬುದು

ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಕೋರಿದ ಎಸ್ ಆರ್ ಎಸ್ ಹೆರಿಟೇಜ್ ಶಾಲೆ

  ಸುದ್ದಿಒನ್, ಚಿತ್ರದುರ್ಗ, ಮೇ. 20 : ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು 2024-25 ರ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭಗೊಂಡಿದ್ದು ಬೇಸಿಗೆ ರಜಾ ಮುಗಿಸಿಕೊಂಡು ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ

ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಮೇ 20: ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ

error: Content is protected !!