ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 09 : ರಾಷ್ಟ್ರೀಯ ಹೆದ್ದಾರಿ 50 ರ ಜಿ.ಆರ್. ಬಳಿಯ ಮಹಾನಗರ್ ಗ್ಯಾಸ್ ಬಂಕ್ ನಲ್ಲಿ ಗ್ತಾಸ್ ಸೋರಿಕೆಯಾಗಿ ಓರ್ವ ಸಾವನ್ನಪ್ಪಿದ ಘಟನೆ ಇಂದು ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.

ಬಂಕ್ ನಲ್ಲಿದ್ದ ಅನಿಲವನ್ನು ಲಾರಿಗೆ ತುಂಬಿಸುವಾಗ ಅನಿಲ ಸೋರಿಕೆಯಾಗಿ ಶಿವಮೊಗ್ಗ ಮೂಲದ ಲಕ್ಷಣ್ (36 ವರ್ಷ) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಜಿ.ಆರ್. ಹಳ್ಳಿಯ ರಘು ಮತ್ತು ಪಿಳ್ಳೇಕೆರೆನಹಳ್ಳಿ ಗಂಗಾಧರ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರು ಮತ್ತು ಹಲವಾರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬೆಂಕಿಗೆ ಕಾರಣವಾದ ಸೋರಿಕೆಯ ಮೂಲ ಮತ್ತು ಈ ಘಟನೆಗೆ ಕಾರಣವಾದ ನಂತರದ ಸ್ಫೋಟದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಉಪ ವಿಭಾಗದ ಡಿ.ವೈ. ಎಸ್.ಪಿ. ದಿನಕರ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಮುದ್ದುರಾಜ್, ಪಿಎಸ್ಐ ಮಂಜುನಾಥ ಮತ್ತು ಸ್ವಾತಿ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.

