ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್, ಪತಂಜಲಿ ಕಿಸಾನ್ ಸೇವಾ ಸಮಿತಿ ಹಾಗೂ ಜ್ಞಾನದೀಪ ವಿದ್ಯಾಮಂದಿರ ಇವರ ಸಂಯುಕ್ತಾಶ್ರಯದಲ್ಲಿ 15 ದಿನಗಳ ಕಾಲ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರವನ್ನು ಮಾರ್ಚ್ 02 ರಿಂದ 16 ರವರೆಗೆ ಬೆಳಿಗ್ಗೆ 5.30 ರಿಂದ 7 ಗಂಟೆಯವರೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ 5ನೇ ತಿರುವು ಜ್ಞಾನದೀಪ ವಿದ್ಯಾಮಂದಿರದಲ್ಲಿ ಆಯೋಜಿಸಲಾಗಿದೆ.

ಮಾರ್ಚ್ 02ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಜ್ಞಾನದೀಪ ವಿದ್ಯಾಮಂದಿರ ಕಾರ್ಯದರ್ಶಿ ನಾಗರತ್ನ ಟಿ.ಬದರಿನಾಥ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗುತ್ತಿಗೆದಾರ ಈ.ಶಿವಕುಮಾರ್, ದಾವಣಗೆರೆ ಸಬ್‌ರಿಜಿಸ್ಟರ್ ರಾಮಕೃಷ್ಣಪ್ಪ ಭಾಗವಹಿಸುವರು. ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಂ.ವಿ.ದೇವಾನಂದ ನಾಯ್ಕ್, ಗೌರವಾಧ್ಯಕ್ಷ ಟಿ.ವಿ..ಸರ್ವದ, ಬಿಎಸ್‌ಟಿ ಉಪಾಧ್ಯಕ್ಷ ಲಲಿತಾ ಬೇದ್ರೆ, ಸಂಘಟನಾ ಕಾರ್ಯದರ್ಶಿ ಜೆ.ಎಸ್.ಗುರುಮೂರ್ತಿ ಉಪಸ್ಥಿತಿವಹಿಸುವರು.
ಯೋಗಶಿಕ್ಷಕರಾದ ಶ್ರೀನಿವಾಸ್, ಎನ್.ಕೆಂಚವೀರಪ್ಪ, ಶ್ರೀಧರ್, ಲಲಿತಾ ಬೇದ್ರೆ, ವೀರೇಶ್, ತಿಪ್ಪೇಸ್ವಾಮಿ, ಶಿವಸ್ವಾಮಿ, ಹೊರಕೇರಪ್ಪ ಅವರು ಶಿಬಿರ ನಡೆಸಿಕೊಡುವರು. ಹೆಚ್ಚಿನ ಮಾಹಿತಿಗಾಗಿ 8453462044, 9901585905 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


