ಚಿತ್ರದುರ್ಗ | ಮಾ.18 ರಿಂದ ಮೂರು ದಿನಗಳವರೆಗೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಉಚಿತ ಪ್ರದರ್ಶನ

1 Min Read

ಚಿತ್ರದುರ್ಗ, (ಮಾ.17) :  ನಗರದ  ಶ್ರೀ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಮಾರ್ಚ್18 ರಿಂದ 3 ದಿನಗಳ ಕಾಲ ಕಾಶ್ಮೀರ್ ಫೈಲ್ಸ್ ಚಿತ್ರ ಉಚಿತವಾಗಿ ಪ್ರದರ್ಶನಗೊಳ್ಳಲಿದೆ.

ಇಂದಿನ ಪೀಳಿಗೆಯ ಯುವಕರು ಕಾಶ್ಮೀರಿ ಪಂಡಿತರ ಇತಿಹಾಸ ತಿಳಿದುಕೊಳ್ಳಬೇಕು. ಇಂತಹ ಕರಾಳ ಇತಿಹಾಸ ಮತ್ತೊಮ್ಮೆ ಮರುಕಳಿಸಬಾರದು.ಈ ಚಿತ್ರದ ಉದ್ದೇಶ ಸತ್ಯವನ್ನು ಜನರಿಗೆ ತಲುಪಿಸುವುದಾಗಿದೆ. ಕಾಶ್ಮೀರದಲ್ಲಿ ಪಂಡಿತರ ಮಾರಣಹೋಮದ ಕುರಿತ ‘ದಿ ಕಾಶ್ಮೀರಿ ಫೈಲ್ಸ್’ ಬೆಳಕು ಚೆಲ್ಲಿದೆ.

ಈ ಮೂಲಕ ಜಿಲ್ಲೆಯ ಯುವಕ, ಯುವತಿಯರು, ಮಹಿಳೆಯರು, ಎಲ್ಲಾ ವರ್ಗದ ಸಮುದಾಯದವರು ದೇಶಾಭಿಮಾನಿಗಳು ಈ ಚಿತ್ರ ವಿಕ್ಷೀಸಿ ರಾಷ್ಟ್ರಾಭಿಮಾನ ಮೂಢಿಸಿಕೊಳ್ಳುವಂತೆ ಜಿಲ್ಲಾ ಬಿಜೆಪಿ ಘಟಕ ಮನವಿ ಮಾಡಿದೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ನಂತರ 10 ಗಂಟೆಗೆ ಎರಡು ಪ್ರಧರ್ಶನ ಇರುತ್ತದೆ.

ಶನಿವಾರ ಮತ್ತು ಭಾನುವಾರ ಬೆಳ್ಳಿಗ್ಗೆ 8 ಗಂಟೆಗೆ ಚಿತ್ರ ಪ್ರದರ್ಶನವಿರುತ್ತದೆ.

ಚಿತ್ರ ವಿಕ್ಷೀಸುವವರು ಬೆಳ್ಳಿಗ್ಗೆ 7:30 ಕ್ಕೆ ಚಿತ್ರ ಮಂದಿರಕ್ಕೆ ಹಾಜರಾಗಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ
ನವೀನ್ ಚಾಲುಕ್ಯ :9110230013,

ಎನ್. ಕೃಷ್ಣ :9480667639,

ಕೆ.ಶ್ರೀರಾಮ :9620085355

ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *