ಸುದ್ದಿಒನ್, ಹಿರಿಯೂರು, ಫೆಬ್ರವರಿ. 22 : ಅಬ್ಬಿನಹೊಳೆ ಮತ್ತು ಹೊಸದುರ್ಗ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಗಂಧ ಮರಗಳನ್ನು ಕಡಿದು ಮಾರುತ್ತಿದ್ದ ಜಾಲವನ್ನು ಅಬ್ಬಿನಹೊಳೆ ಪೊಲೀಸರು ಬೇಧಿಸಿ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಜುನಾಥ, ರವಿ, ಅಬ್ದುಲ್ ರೆಹಮಾನ್ ಮತ್ತು ರುಹುಲ್ಲಾ ಅವರನ್ನು ಬಂಧಿಸಿ ಅವರಿಂದ 7,78,500/- ರೂ ಮೌಲ್ಯದ 311 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.

ಹಿರಿಯೂರು ತಾಲೂಕಿನ ಕುರುಬರಹಳ್ಳಿಯ ರವಿ ಎಂಬುವವರು ದಿನಾಂಕ-11-08-2024 ರಂದು ಅವರ ಜಮೀನಿನಲ್ಲಿದ್ದ 12 ಶ್ರೀಗಂಧದ ಮರಗಳು ಹಾಗೂ ಅವರ ಪಕ್ಕದ ಚಂದ್ರಶೇಖರ್ ರವರ ಜಮೀನಿನಲಿ 3 ಶ್ರೀಗಂಧದ ಮರಗಳು ಮತ್ತು ತಿಮ್ಮಪ್ಪನ ಜಮೀನಿನಲಿ 3 ಶ್ರೀಗಂಧದ ಮರಗಳ ಕಳ್ಳತನವಾದ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ರವರು ಶ್ರೀಗಂಧ ಕಳ್ಳತನ ಪ್ರಕರಣಗಳ ಪತ್ತೆ ಸುಲುವಾಗಿ ಒಂದು ವಿಶೇಷ ತಂಡವನ್ನು ರಚಿಸಿದ್ದರು.
ಈ ವಿಶೇಷ ತಂಡದಲ್ಲಿ ಭಾಗಿಯಾಗಿದ್ದ ಗುಡ್ಡಪ್ಪ ಎನ್ ಸಿಪಿಐ ಐಮಂಗಲ ವೃತ್ತ, ಹಾಗೂ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್‌ಐ ಬಾಹುಬಲೆ ಎಂ ಪಡನಾಡ, ಮಂಜುನಾಥ ಜಿ, ಮತ್ತು ಪೊಲೀಸ್ ಸಿಬ್ಬಂದಿಯವರಾದ ರಾಮಯ್ಯ ನಿಂಗರಾಜ್, ನಾಗರಾಜ.ಕೆ, ದಿಲೀಪ, ನಾಗಣ್ಯ, ಪ್ರವೀಣ ಹುಲುಗೇಶ, ರುದ್ರೇಶ, ನೌಶಾದ್, ಕವಿರಾಜ್ ಇವರನ್ನು ಚಿತ್ರದುರ್ಗ ಜಿಲೆಯ ಪೊಲೀಸ್ ಅಧೀಕ್ಷಕರು ಶಾಘಿಸಿರುತ್ತಾರೆ.

