ಚಿತ್ರದುರ್ಗ | ಅಕ್ರಮ ಗಾಂಜಾ ಸಾಗಣೆ ನಾಲ್ವರು ಬಂಧನ: 2 ಕೆ.ಜಿ. ಗಾಂಜಾ ವಶ

1 Min Read

 

ಚಿತ್ರದುರ್ಗ, ಅ.16: ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಗಾಂಜಾ ಸಾಗಣಿಕೆ ಮಾಡುತ್ತಿದ್ದ 2 ಪ್ರತ್ಯೇಕ ಪ್ರಕರಣಗಳನ್ನು ಭೇಧಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿ 2 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಕ್ಟೋಬರ್ 10 ರಂದು ಹಿರಿಯೂರು ತಾಲೂಕು ಗಾರೇದಿಂಡು ರಸ್ತೆಯಲ್ಲಿ ಮಧ್ಯಾಹ್ನ 2:30 ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ ಕಂದಿಕೆರೆ ಗ್ರಾಮದ ಯಶವಂತ, ಹಿರಿಯೂರು ಪಟ್ಟಣದ ಭರತ್.ಹೆಚ್.ಎನ್. ಅವರನ್ನು ಬಂಧಿಸಿ 300 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕಿ ವನಿತಾ.ಎ, ಉಪ ನಿರೀಕ್ಷಕ ನಾಗರಾಜ, ಅಬಕಾರಿ ಕಾನ್ಸ್ಟೇಬಲ್ ರಾಮಾಂಜನೇಯ, ವಾಹನ ಚಾಲಕ ನಾಗರಾಜ.ಕೆ.ತೋಳಮಟ್ಟಿ ಪಾಲ್ಗೊಂಡಿದ್ದರು.

ಸಂಜೆ 7:30ಕ್ಕೆ ಮೊಳಕಾಲ್ಮೂರು ತಾಲೂಕಿನ ವೆಂಕಟಾಪುರ ಗ್ರಾಮದ ಹಡಗಿಲಿ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ, ಆಂದ್ರ ಪ್ರದೇಶದ ರಾಯದುರ್ಗ ತಾಲ್ಲೂಕಿನ ಮಲ್ಲಪ್ಪ, ಗೊಲ್ಲ ಕೆಂಜಂಡಪ್ಪ ಅವರನ್ನು ಬಂಧಿಸಿ 1726 ಗ್ರಾಂ ಗಾಂಜಾ ವಶಪಡಿಸಿಕೊಳ್ಳಾಗಿದೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ವಿಚಕ್ಷಣಾ ದಳದ ಅಬಕಾರಿ ಉಪನಿರೀಕ್ಷಕ ಸಿದ್ದೇಶ್ ನಾಯ್ಕ್.ಕೆ, ಅಬಕಾರಿ ಕಾನ್ಸ್ಟೇಬಲ್ ಬಸವರಾಜ.ಜೆ, ವಾಹನ ಚಾಲಕ ಎಸ್.ತಿಪ್ಪೆಸ್ವಾಮಿ ಪಾಲ್ಗೊಂಡಿದ್ದರು.

ಸದರಿ ಪ್ರಕರಣಗಳಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ಮಾಡಿ, ಎನ್.ಡಿ.ಪಿ.ಎಸ್(ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್) ಕಾಯ್ದೆ ಅನುಸಾರ ಪ್ರಕರಣ ದಾಖಲಿಸಲಾಗಿದೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *