Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹತ್ತನೆ ತರಗತಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಒಂದನೇ ಸ್ಥಾನದಲ್ಲಿರಬೇಕು : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜು.26) : ಕಾಲ ಕಾಲಕ್ಕೆ ಬದಲಾಗುವ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ತಾಂತ್ರಿಕತೆ ಜೊತೆ ಪಾಠವನ್ನು ಹೇಳಬೇಕು ಎಂದು ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು ಜಿ.ಆರ್.ಜೆ. ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತ.ರಾ.ಸು.ರಂಗಮಂದಿರದಲ್ಲಿ ಜಿಲ್ಲೆಯ ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಬುಧವಾರ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಥಿಯೋಡೋರಸ್ ಸುರಳಿ ಪೈಥಾಗೊರಸನ ಪ್ರಮೇಯದ ಮಾದರಿ ಉದ್ಘಾಟಿಸಿ ಮಾತನಾಡಿದರು.

ಕಳೆದ ಮಾರ್ಚ್-ಏಪ್ರಿಲ್‍ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಒಂದನೆ ಸ್ಥಾನ. ಗಣಿತದಲ್ಲಿ ಎರಡನೆ ಸ್ಥಾನ ಪಡೆದಿರುವುದು ಸಂತೋಷದ ಸಂಗತಿ. ಎಲ್ಲಾ ವಿಷಯ ಶಿಕ್ಷಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದ ಫಲವಾಗಿ ಪ್ರಥಮ ಸ್ಥಾನಗಳಿಸಲು ಕಾರಣವಾಯಿತು. ಹಾಗಂತ ಶಿಕ್ಷಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೈಮರೆತು ಕೂರಬಾರದು. ಕಠಿಣ ಪರಿಶ್ರಮದೊಂದಿಗೆ ಮಕ್ಕಳ ಮನಸ್ಸಿಗೆ ಗಣಿತ ನಾಟುವಂತೆ ಪಾಠ ಕಲಿಸಬೇಕು ಎಂದು ಸೂಚಿಸಿದರು.

ಗುರಿ ಮುಟ್ಟಬೇಕಾದರೆ ಕುದುರೆತರ ಓಡಿದರೆ ಸಾಲದು. ಕುದುರೆಗಿಂತ ವೇಗವಾಗಿ ಓಡಬೇಕು. ಗಣಿತ ಎಲ್ಲಾ ವಿಷಯಗಳಂತೆ ಅಲ್ಲ. ವಿಶೇಷತೆಯಿದೆ. ಸೂತ್ರದ ಮೂಲಕ ಗಣಿತವನ್ನು ಅಭ್ಯಾಸ ಮಾಡಬೇಕು. ಸಕಾರಾತ್ಮಕ, ನಕಾರಾತ್ಮಕ ಎರಡು ಇದರಲ್ಲಿದೆ. ಮುಂದಿನ ವರ್ಷ ಹತ್ತನೆ ತರಗತಿ ಪರೀಕ್ಷೆಯಲ್ಲಿ ಗಣಿತದಲ್ಲಿ ಜಿಲ್ಲೆ ರಾಜ್ಯಕ್ಕೆ ಒಂದನೆ ಸ್ಥಾನದಲ್ಲಿರಬೇಕು. ಸಾಧನೆ ಮಾಡುವಾಗ ನೂರಾರು ಅಡಚಣೆ ಎದುರಾಗುವುದು ಸಹಜ. ಗುರಿ ತಲುಪಲು ಪ್ರಯತ್ನ ಪಟ್ಟಾಗ ಮಾತ್ರ ಯಶಸ್ಸು ಗಳಿಸಬಹುದು. ಗಣಿತ ಕಬ್ಬಿಣದ ಕಡಲೆ ಎನ್ನುವುದು ತಪ್ಪು. ಕಷ್ಟದಿಂದ ಮಾತ್ರ ಜೀವನದಲ್ಲಿ ಬೇರೆ ಬೇರೆ ಪಾಠಗಳನ್ನು ಕಲಿಯಬಹುದು. ಇಂತಹ ಕಾರ್ಯಾಗಾರಗಳು ಉತ್ತಮ ಫಲಿತಾಂಶಕ್ಕೆ ನೆರವಾಗುತ್ತದೆ. ಕಷ್ಠ, ಪರಿಶ್ರಮ, ಏಕಾಗ್ರತೆಯಿಂದ ಮಾತ್ರ ವಿದ್ಯಾರ್ಥಿಗಳು ಓದಿನಲ್ಲಿ ಏನನ್ನಾದರೂ ಸಾಧಿಸಬಹುದು. ಇದಕ್ಕೆ ಶಿಕ್ಷಕರುಗಳ ಪರಿಶ್ರಮವೂ ಮುಖ್ಯ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‌ ರೆಡ್ಡಿ ಮಾತನಾಡಿ ಕಳದ ವರ್ಷ ಹತ್ತನೆ ತರಗತಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಒಂದನೇ ಸ್ಥಾನ ಪಡೆದುಕೊಂಡಿತು. ಮುಂದಿನ ವರ್ಷವೂ ಕೂಡ ನಮ್ಮ ಜಿಲ್ಲೆ ಒಂದನೆ ಸ್ಥಾನವನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಗಣಿತದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.

ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಹೇಳುವ ವಿಚಾರಗಳನ್ನು ಮನನ ಮಾಡಿಕೊಂಡು ತರಗತಿಯಲ್ಲಿ ಮಕ್ಕಳಿಗೆ ಬೋಧಿಸುವುದರ ಜೊತೆಗೆ ಶೈಕ್ಷಣಿಕ ಅಭಿವೃದ್ದಿಗೆ ಪೂರಕ ಚಟುವಟಿಕೆಗಳನ್ನು ಆರಂಭಿಸಬೇಕು. ಮಕ್ಕಳಲ್ಲಿರುವ ನೂನ್ಯತೆಗಳನ್ನು ಗುರುತಿಸಿ ಸರಿಪಡಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದು ತಿಳಿಸಿದರು.

ಗಣಿತ ವಿಷಯ ಪರಿವೀಕ್ಷಕಿ ಸವಿತ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷವೂ ಇಂತಹ ಕಾರ್ಯಾಗಾರಗಳನ್ನು ಗಣಿತ ಶಿಕ್ಷಕರುಗಳಿಗೆ ಆಯೋಜಿಸಲಾಗುತ್ತಿದೆ. ಇದರಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ. ಅದೇ ರೀತಿ ಇತರೆ ವಿಷಯಗಳ ಶಿಕ್ಷಕರುಗಳಿಗೂ ಕಾರ್ಯಾಗಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಡಿ.ಡಿ.ಪಿ.ಐ.ರವರ ಮಾರ್ಗದರ್ಶನದಂತೆ ಇಡಿ ಇಲಾಖೆ ಕಷ್ಟ ಪಟ್ಟ ಫಲವಾಗಿ ರಾಜ್ಯದಲ್ಲಿ ಗಣಿತ ಎರಡನೆ ಸ್ಥಾನ ಪಡೆಯಲು ಸಾಧ್ಯವಾಯಿತು. ಮುಂದಿನ ಸಾರಿ ಒಂದನೆ ಸ್ಥಾನಕ್ಕೇರುವ ಈಗಿನಿಂದಲೆ ತಯಾರಿ ನಡೆಸುವುದಾಗಿ ಭರವಸೆ ನೀಡಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ತಾಲ್ಲೂಕು ಸಂಘದ ಅಧ್ಯಕ್ಷ ಮೃತ್ಯುಂಜಯ, ಡಿ.ವೈ.ಪಿ.ಸಿ. ಸಿ.ಎಂ.ತಿಪ್ಪೇಸ್ವಾಮಿ, ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ವಿಷಯ ಪರಿವೀಕ್ಷಕರುಗಳಾದ ಗೋವಿಂದಪ್ಪ, ಶಿವಣ್ಣ, ಚಂದ್ರಣ್ಣ, ಬಸವರಾಜ್ ಓಲೇಕಾರ್ ವೇದಿಕೆಯಲ್ಲಿದ್ದರು.

ಮೈಸೂರಿನಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹರ್ಷ, ಸತೀಶ್ ಇವರುಗಳು ಕಾರ್ಯಾಗಾರದಲ್ಲಿ ಅನ್ವಯಿಕ ಪ್ರಶ್ನೆಗಳ ರಚನೆ ಮತ್ತು ಗಣಿತ ಬೋಧನೆಯಲ್ಲಿತಂತ್ರಜ್ಞಾನ ಬಳಕೆ ಕುರಿತು ಶಿಕ್ಷಕರುಗಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರುಗಳ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಧಾರಾಕಾರ ಮಳೆಗೆ ಕೋಲಾರದಲ್ಲಿ ಎರಡೂವರೆ ಎಕರೆ ಬಾಳೆ ನಾಶ..!

ಕೋಲಾರ: ಮಳೆಯನ್ನು ಕಂಡು ರೈತ ಅದೆಷ್ಟೋ ವರ್ಷಗಳು ಆಗಿತ್ತೇನೋ ಎಂಬ ಭಾವನೆ ಈ ಬಾರಿಯ ಬಿಸಿಲು ನೋಡಿ ಮೂಡಿತ್ತು. ಆದರೆ ವರುಣರಾಯ ಕೃಪೆ ಏನೋ ತೋರಿದ್ದಾನೆ. ನಿನ್ನೆಯಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಇನ್ಮುಂದೆ ಉತ್ತಮ ಮಳೆಯಾಗುವ

30 ವರ್ಷದ ಹಳೇ ಕಥೆ ಹೇಳಿದ ಶಿವರಾಮೇಗೌಡ : ಇಂಗ್ಲೆಂಡ್ ನಲ್ಲೂ ತಗಲಾಕಿಕೊಂಡಿದ್ರಂತೆ ರೇವಣ್ಣ..!

ಮಂಡ್ಯ: ಅಬ್ಬಬ್ಬಾ.. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರಗಳು ದಿನೇ‌ ದಿನೇ ಒಂದೊಂದು ವಿಚಾರಗಳು ಬೆಳಕಿಗೆ ಬರುತ್ತಿವೆ. ಕಳೆದ ಮೂವತ್ತು ವರ್ಷಗಳ ಹಿಂದೆಯೂ ಇಂಥದ್ದೊಂದು ಘಟನೆ ಅದರಲ್ಲೂ ಇಂಗ್ಲೆಂಡ್ ನಲ್ಲಿ‌ ನಡೆದಿತ್ತಂತೆ. ಈ

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

error: Content is protected !!