ಚಿತ್ರದುರ್ಗ, (ಜೂ.05) : ನಗರದ ಹಲವೆಡೆ ಇಂದು ವಿದ್ಯುತ್ ಪೂರೈಕೆ ವ್ಯತ್ಯಯ ಮತ್ತು ಬಿಸಿಲ ಧಗೆಯಿಂದ ಬಳಲುತ್ತಿದ್ದ ಕೋಟೆ ನಾಡಿನ ಜನರಿಗೆ ಭಾನುವಾರ ಸುರಿದ ಮಳೆಯ ಸಿಂಚನವು ಕೊಂಚ ತಂಪನೆರೆಯಿತು.
ಬಾರಿ, ಗುಡುಗು, ಸಿಡಿಲು ಮಿಂಚಿನಿಂದ ಆರಂಭವಾದ ಮಳೆ ಸಂಜೆ 7 ರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ಮಳೆ ಸುರಿಯಿತು.
ಏಕಾಏಕಿ ಸುರಿದ ಮಳೆಯಿಂದಾಗಿ,
ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯ ತುಂಬೆಲ್ಲಾ ಮಳೆ ನೀರು ನಿಂತದ್ದರಿಂದ
ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸವಾರಿ ಮಾಡಿದ ದೃಶ್ಯ ಮತ್ತು
ಸಾರ್ವಜನಿಕರು ಮಳೆಗೆ ನೆನೆಯದಂತೆ ಸಮೀಪದ ಅಂಗಡಿ, ಕಟ್ಟಡಗಳ ಬಳಿ ನಿಂತ ದೃಶ್ಯ ಕಂಡು ಬಂತು.
ಕಳೆದ ತಿಂಗಳ ಮೇ 25 ತಾರೀಖಿನಂದ ರೋಹಿಣಿ ಮಳೆಯು ಆರಂಭವಾಗಿ ಜೂನ್ 10 ರವರೆಗೂ ಇರುತ್ತದೆ.