ಚಿತ್ರದುರ್ಗ,(ಜುಲೈ 8) : ಜಿಲ್ಲೆಯಲ್ಲಿ ಜುಲೈ 7ರಂದು ಸುರಿದ ಮಳೆ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 18.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಉಳಿದಂತೆ ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 5.2 ಮಿ.ಮೀ, ಬಾಗೂರು 13.2 ಮಿ.ಮೀ, ಮತ್ತೋಡು 2.4 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆಯಲ್ಲಿ 7.2 ಮಿ.ಮೀ, ಬಿ.ದುರ್ಗ 16.4 ಮಿ.ಮೀ, ಚಿಕ್ಕಜಾಜೂರು 6.2 ಮಿ.ಮೀ, 4 ಹೆಚ್.ಡಿ.ಪುರ 8.4 ಮಿ.ಮೀ, ರಾಮಗಿರಿ 4.2 ಮಿ.ಮೀ, ತಾಳ್ಯ 4.2 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 4 ಮಿ.ಮೀ, ಚಿತ್ರದುರ್ಗ -2ರಲ್ಲಿ 1.2 ಮಿ.ಮೀ, ಐನಳ್ಳಿ 2.8 ಮಿ.ಮೀ, ಭರಮಸಾಗರ 10.3 ಮಿ.ಮೀ, ಸಿರಿಗೆರೆ 13.6 ಮಿ.ಮೀ, ಹಿರೇಗುಂಟನೂರು 1 ಮಿ.ಮೀ, ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 3.2 ಮಿ,ಮೀ. ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರ 4 ಮಿ.ಮೀ, ನಾಯಕನಹಟ್ಟಿ 2.2 ಮಿ.ಮೀ, ಡಿ.ಮರಿಕುಂಟೆ 2.2 ಮಿ.ಮೀ, ಮಳೆಯಾಗಿದೆ. ಮೊಳಕಾಲ್ಮೂರಿನ ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 3.6 ಮಿ.ಮೀ, ರಾಮಪುರ 2 ಮಿ.ಮೀ, ರಾಯಪುರ 2.1 ಮಿ.ಮೀ, ದೇವಸಮುದ್ರ 11 ಮಿ.ಮೀ, ಬಿ.ಜಿ.ಕೆರೆ 1.6 ಮಿ.ಮೀ ಮಳೆಯಾಗಿದೆ.
ಗುರುವಾರ ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಒಟ್ಟು-08 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಿತ್ರದುರ್ಗದಲ್ಲಿ-04 ಮನೆಗಳು, ಹೊಳಲ್ಕೆರೆಯಲ್ಲಿ-04 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಸಣ್ಣ ಜಾನುವಾರು, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.