ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ನಾಳೆ ಜಾಗೃತ ರನ್ 2.0 ; ಮ್ಯಾರಥಾನ್ ಓಟ

1 Min Read

 

ಸುದ್ದಿಒನ್, ಚಿತ್ರದುರ್ಗ. ಫೆ.28: ಯುವ ಜನತೆಯನ್ನು ಮಾದಕ ವ್ಯಸನದಿಂದ ದೂರವಿಟ್ಟು, ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 01ರಂದು ಚಿತ್ರದುರ್ಗ ನಗರದಲ್ಲಿ “ಜಾಗೃತ ರನ್ 2.0” ಎಂಬ 5ಕೆ ಮ್ಯಾರಥಾನ್ ಓಟ ಆಯೋಜಿಸಲಾಗಿದೆ.

ಜಿಲ್ಲೆಯ ಯುವ ಸಮೂಹವು ಜಿಮ್, ನಡಿಗೆ, ಓಟ, ಯೋಗ, ಧ್ಯಾನ, ದೈಹಿಕ ವ್ಯಾಯಾಮ ಹಾಗೂ ಇನ್ನಿತರ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಈ ಓಟದ ಮುಖ್ಯ ಉದ್ದೇಶವಾಗಿದೆ. ಮಾರ್ಚ್ 01ರಂದು ಬೆಳಿಗ್ಗೆ 7ಕ್ಕೆ ಚಿತ್ರದುರ್ಗ ನಗರದ ಡಿಎಆರ್ ಮೈದಾನದಿಂದ ಮ್ಯಾರಥಾನ್ ಪ್ರಾರಂಭವಾಗಿ, ವಾಸವಿ ಲ್ಯಾಬ್ ಮುಂಭಾಗದಿಂದ ಬಿ.ಡಿ.ರಸ್ತೆಯ ಮೂಲಕ ಚಳ್ಳಕೆರೆ ಸರ್ಕಲ್ (ಯು ಟರ್ನ್) ನಿಂದ ಮದಕರಿ ಸರ್ಕಲ್, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಹೆಡ್ ಪೋಸ್ಟ್ ಆಫೀಸ್ ಹತ್ತಿರ (ಯು ಟರ್ನ್) ಆಗಿ ಗಾಂಧಿವೃತ್ತ, ಪ್ರವಾಸಿ ಮಂದಿರದ ಹತ್ತಿರ ಎಡಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಮೂಲಕ ಡಿಎಆರ್ ಮೈದಾನದಲ್ಲಿ ಓಟ ಮುಕ್ತಾಯಗೊಳ್ಳಲಿದೆ.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿರುವ 5 ಕೆ ಮ್ಯಾರಥಾನ್ ಓಟದಲ್ಲಿ ಭಾಗವಹಿಸುವವರಿಗೆ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ, ಯುವಕ-ಯುವತಿಯರಿಗೆ  ಮೊದಲನೇ ಬಹುಮಾನ ರೂ.5000/-, ಎರಡನೇ ಬಹುಮಾನ ರೂ.3000/-, ಮೂರನೇ ಬಹುಮಾನ ರೂ.2000/- ಹಾಗೂ ಮೆಡಲ್, ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಈ 5ಕೆ ಮ್ಯಾರಥಾನ್‍ನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದವರು ಹೆಚ್ಚಿನದಾಗಿ ಭಾಗವಹಿಸಬೇಕು. ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.
==========

Share This Article
Enable Notifications OK No thanks