ಚಿತ್ರದುರ್ಗ , (ಆ.12) : ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ಸ್ ಮಾರಾಟಗಾರರ ಸಂಘ (ರಿ). ಚಿತ್ರದುರ್ಗ (Chitradurga District IT Dealers Association) ಇದರ ಅಧ್ಯಕ್ಷರಾಗಿ ಶಿವಕುಮಾರ್.ಕೆ.ಸಿ, ಮತ್ತು ಕಾರ್ಯದರ್ಶಿಯಾಗಿ ವೆಂಕಟೇಶ್‍ಮೂರ್ತಿ.ಎನ್.ವಿ ಆಯ್ಕೆಯಾಗಿದ್ದಾರೆ.
ನಗರದ ಹೊರವಲಯದಲ್ಲಿರುವ ಮರುಳಪ್ಪ ಬಡಾವಣೆಯ ವೈ.ಆರ್. ಆದಿಶೇಷ ರೋಟರಿ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 2022-23 ಮತ್ತು 2023-24 ಎರಡು ವರ್ಷಗಳ ಅವಧಿಗೆ ಜಿಲ್ಲಾ ಅಧ್ಯಕ್ಷರಾಗಿ ಶಿವಕುಮಾರ್.ಕೆ.ಸಿ, ಮೆ|| ಎಸ್.ಎಸ್.ಟೆಕ್ನಾಲಜಿಸ್, ಚಿತ್ರದುರ್ಗ ಕಾರ್ಯದರ್ಶಿಯಾಗಿ ವೆಂಕಟೇಶ್‍ಮೂರ್ತಿ.ಎನ್.ವಿ, ಮೆ|| ಬಾಲಾಜಿ ಕಂಪ್ಯೂಟರ್ಸ್, ಚಿತ್ರದುರ್ಗ ಇವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಣಿ ಸಮಿತಿಯ ವಿವರ
ಗೌರವ ಅಧ್ಯಕ್ಷರು: ಮಹೇಶ.ಜಿ.ಎನ್
ಅಧ್ಯಕ್ಷರು: ಶಿವಕುಮಾರ್.ಕೆ.ಸಿ
ಉಪಾಧ್ಯಕ್ಷರು : ದಸ್ತಗೀರ್ ಬೇಗ್ ಮತ್ತು ಮಂಜುನಾಥ್ ರಾಜು
ಕಾರ್ಯದರ್ಶಿ: ವೆಂಕಟೇಶ್ ಮೂರ್ತಿ.ಎನ್.ವಿ
ಸಹಕಾರ್ಯದರ್ಶಿ : ನಾಗರಾಜ್. ಎಂ
ಖಜಾಂಚಿ: ರಾಘವೇಂದ್ರ .ಎಂ.ಜೆ
ಸಂಘಟನಾ ನಿರ್ದೇಶಕರು :
1.ವಿಜಯ್ ಕುಮಾರ್
2.ಮಂಜುನಾಥ್ ಮಾತೃಶ್ರೀ
3.ವಸಂತ್ ಕುಮಾರ್
4.ಮೋಹನ್ .ಸಿ.ಎನ್
5.ದಿವಾಕರ್
6.ರಾಘವೇಂದ್ರ .ಜಿ
ಇವರನ್ನು ಆಯ್ಕೆ ಮಾಡಲಾಯಿತು ಎಂದು ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ಸ್ ಮಾರಾಟಗಾರರ ಸಂಘ (ರಿ). ಚಿತ್ರದುರ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.