ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಹಿರಿಯೂರು, ಅಕ್ಟೋಬರ್. 08 : ಹಿರಿಯೂರು ಚಳ್ಳಕೆರೆ ಮೊಳಕಾಲ್ಮೂರು, ಈ ಮೂರು ತಾಲ್ಲೂಕಿನಲ್ಲಿ ಬೆಳೆಗಳು ಸಂಪೂರ್ಣ ಒಣಗಿದ್ದು ಈ ಕುರಿತು ಸರ್ಕಾರಕ್ಕೆ ವರದಿ ನೀಡಿಲ್ಲ. ರೈತರ ಜಮೀನಿಗೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳೋ ಕೆಲಸವು ಸಹ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ರೈತ ಮೊರ್ಚ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಜೀ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲ್ಲೂಕಿನ ರೈತರ ಒಣಗಿದ ಶೇಂಗಾ ಬೆಳೆ ವಿಕ್ಷಣೆಮಾಡಿ ಅವರು ಮಾತನಾಡಿ,ಚಳ್ಳಕೆರೆ ಮೊಳಕಾಲ್ಮೂರು ಹಾಗೂ ಹಿರಿಯೂರು :ತಾಲ್ಲೂಕಿನಲ್ಲಿ ಸಾವಿರ ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ,ತೊಗರಿ, ಮೇಕ್ಕಜೋಳ ಬಿತ್ತನೆ ಮಾಡಲಾಗಿದ್ದು ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಒಣಗಿದ್ದು ಇಲ್ಲಿನ ರೈತರು ತುಂಬ ಸಂಕಷ್ಟ ಸಿಲುಕಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲಾ, ಜಿಲ್ಲಾ ಮಂತ್ರಿಗಳು ಒಂದುದಿನವಾದರೂ ರೈತರ ಜಮೀನುಗಳಿಗೆ ಭೇಟಿ ನೀಡಿ ಒಣಗಿದ ಬೆಳೆ ವೀಕ್ಷಣೆ ಮಾಡಿಲ್ಲಾ ಸರ್ಕಾರಕ್ಕೆ ವರದಿ ನೀಡುವ ಗೋಜಿಗೆ ಸಹ ಹೋಗಿಲ್ಲ. ಇಲ್ಲಿ ಪರಿಸ್ಥಿತಿ ನೋಡಿದರೆ ರೈತರು ನಿಜವಾಗಲೂ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ.ಒಣಗಿದ ಬೆಳೆ ಸಮೀಕ್ಷೆ ಕುರಿತಂತೆ ಕೇಂದ್ರ ಸರ್ಕಾರಕ್ಕೆ ವರದಿ ಕಳಿಸಲಾಗುವುದು. ಕೇಂದ್ರದಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಕುಡಿಸುವಂತೆ ಮನವಿ ಮಾಡಲಾಗುವುದು ಎಂದರು..
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ಈಗಾಗಲೇ ಈ ಮೂರು ತಾಲೂಕುಗಳಲ್ಲಿ ಬರಗಾಲ ತಾಂಡವಾಡುತ್ತಿದ್ದು ಇಂತಹ ಸಮಯದಲ್ಲಿ ಆದ ಗಾಯಕ್ಕೆ ಬರೇ ಎಳೆಯುವಂತೆ ರೈತರು ಬೆಳೆ ಸಾಲವನ್ನು ಕಟ್ಟಬೇಕು ಎಂದು ಬ್ಯಾಂಕಿನ ಅಧಿಕಾರಿಗಳು ನೀಡುತ್ತಿದ್ದಾರೆ. ಸರ್ಕಾರ ಬೆಳೆ ಸಾಲ ಮನ್ನಾ ಮಾಡಬೇಕು ರೈತರನ್ನು ಉಳಿಸುವಂತಹ ಕೆಲಸ ಮಾಡಬೇಕು.
ಸರ್ಕಾರ ರೈತರ ನೆರವಿಗೆ ಬಾರದ ಇದ್ದಾರೆ ರೈತರ ಜೊತೆಗೂಡಿ ಬಿಜೆಪಿ ಪಕ್ಷದ ವತಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ದೊಡ್ಡ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದರು.
ಬಿಜೆಪಿ ಜಿಲಾಧ್ಯಕ್ಷರಾದ ಕೆಟಿ.ಕುಮಾರಸ್ವಾಮಿ ಮಾತನಾಡಿ ಈ
ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಹಾಗೂ ತೊಗರಿ ಬೆಳೆ ನೆಲಕಚ್ಚಿದೆ. ಮಳೆ ಬಾರದೆ ಮೂಕ ಪ್ರಣಿಗಳಿಗೂ ಸಹ ಮೇವಿನ ಕೊರತೆ ಉಂಟಾಗಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಇನ್ನಾದರೂ ಬೆಳೆ ವಿಮೆ ಬೆಳೆ ಪರಿಹಾರವನ್ನ ಸಿಗುವಂತೆ ಮಾಡಬೇಕು,ಇಲ್ಲಾವಾದರೆ ರೈತರ ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದರು.
ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷರಾದ ಬಿಎಂ ಸುರೇಶ್ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ 25,000 ಎಕರೆ ಪ್ರದೇಶದಲ್ಲಿ. ತೊಗರಿ,49;ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು ಸುಮಾರು ಎರಡು ತಿಂಗಳು ಮಳೆ ಬಾರದ ಕಾರಣ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ ಇದರಿಂದಾಗಿ ರೈತರು ಹಾಕಿದ ಬಂಡವಾಳವು ಸಹ ಸಿಗದಂತಾಗಿದ್ದು ಜೀವನ ಸಾಗಿಸುವುದೇ ಕಷ್ಟವಾಗುತ್ತದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರಿಯಾದ ಮಾಹಿತಿ ನೀಡಿ ಈ ತಾಲೂಕನ್ನ ಬರದ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ, ಮಲ್ಲಿಕಾರ್ಜುನ, ಬಿಜೆಪಿ ಮುಖಂಡರಾದ ಬಾಳೆಕಾಯಿ ರಾಮದಾಸ್, ಬಿಜೆಪಿ ಉಪಾಧ್ಯಕ್ಷರಾದ ಸಿದ್ದೇಶ (ಮಿಲಿಟರಿ) ತಾಲೂಕು ಪ್ರಧಾನ ಕಾರ್ಯದರ್ಶಿ ಮಿರ ಸಾಬಿಹಳ್ಳಿ ಸುರೇಶ್, ಬಿಜೆಪಿ ಉಪಾಧ್ಯಕ್ಷ ರಾದ ಸಿದ್ದೇಶ ಮಿಲ್ಟ್ರಿ, ಪ್ರದಾನ ಕಾರ್ಯದರ್ಶಿ ಆರ್.ಸುರೇಶ ಮಿರಾಸಾಭಿಹಳ್ಳಿ
ವಿಡುಪನಕುಂಟೆಸಿದ್ದೇಶ, ಸತ್ತಯ್ತಪ್ಪ ಜಯರಾಂ,ಪರಶುರಾಮಪುರ ಸಿದ್ದೇಶ, ಕರಿಕೆರೆ ಶಿವಣ್ಣ, ರಾಘವೇಂದ್ರ,ಮತ್ಸಸಮುದ್ರ ಕರಿಯಣ್ಣ, ಶೋಭರಾಜು ತಿಪ್ಪೇಸ್ವಾಮಿ ಹನುಮಂತಪ್ಪ ಲೋಕನಾಥ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ರೈತರು ಇದ್ದರು.







