ಚಿತ್ರದುರ್ಗ,(ಸೆಪ್ಟಂಬರ್ 05) : ಚಿತ್ರದುರ್ಗ ಜಿಲ್ಲಾ ಗೃಹರಕ್ಷಕದಳದಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕರ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗೃಹರಕ್ಷಕರ ಆಯ್ಕೆ ಸಮಿತಿ ಅಧ್ಯಕ್ಷರು, ಚಿತ್ರದುರ್ಗ ಇವರ ಆದೇಶದ ಮೇರೆಗೆ ಚಿತ್ರದುರ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ 79 ಗೃಹರಕ್ಷಕ ಸದಸ್ಯರ ಖಾಲಿ ಸ್ಥಾನಗಳು ಇವೆ. ಖಾಲಿ ಇರುವ ಗೃಹರಕ್ಷಕರ ಗೌರವ ಸದಸ್ಯ ಸ್ಥಾನಗಳಿಗೆ ಅರ್ಹರಿರುವ ಹಾಗೂ ಸ್ವಯಂ ಸೇವಕ ಗೃಹರಕ್ಷಕ ಸದಸ್ಯರಾಗಲು ಇಚ್ಚೆ ಇರುವ ಸೇವಾ ಮನೋಭಾವವುಳ್ಳ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಮಾದೇಷ್ಟರು, ಗೃಹರಕ್ಷಕದಳ ಕಚೇರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇಲ್ಲಿ ನಿಗದಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ ಸದಸ್ಯತ್ವ ಸ್ಥಾನಗಳ ವಿವರ: ಚಿತ್ರದುರ್ಗ ಘಟಕದಲ್ಲಿ 37 ಪುರುಷ ಹಾಗೂ 15 ಮಹಿಳಾ ಖಾಲಿ ಸ್ಥಾನಗಳು ಸೇರಿದಂತೆ 52 ಸದಸ್ಯತ್ವ ಸ್ಥಾನಗಳು, ಹಿರಿಯೂರು ಘಟಕದಲ್ಲಿ 13 ಪುರುಷ ಸದಸ್ಯ ಸ್ಥಾನಗಳು, ಮೊಳಕಾಲ್ಮುರು ಘಟಕದಲ್ಲಿ 14 ಸದಸ್ಯತ್ವ ಸ್ಥಾನಗಳು ಸೇರಿದಂತೆ ಒಟ್ಟು 79 ಸ್ವಯಂ ಸೇವಕ ಗೃಹರಕ್ಷಕ ಸದಸ್ಯತ್ವ ಸ್ಥಾನಗಳು ಖಾಲಿ ಇವೆ.
ಅರ್ಹತೆಗಳು: ವಯಸ್ಸು ಕನಿಷ್ಠ 19 ರಿಂದ 45 ವರ್ಷ ಒಳಗಿರಬೇಕು. 10ನೇ ತರಗತಿ ಉತ್ತೀರ್ಣರಾಗಿರಬೇಕು. ಗೃಹರಕ್ಷಕ ಸದಸ್ಯತ್ವಕ್ಕೆ ಸೇರಬಯಸುವ ಅಭ್ಯರ್ಥಿಗಳು ಗರಿಷ್ಠ 5 ಕಿ.ಮೀ. ಒಳಗಿನವರಾಗಿರಬೇಕು. ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು. ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರಬಾರದು. ಉತ್ತಮ ದೇಹದಾಡ್ರ್ಯತೆಯನ್ನು ಹೊಂದಿರಬೇಕು. ಪುರುಷರಿಗೆ – ಎತ್ತರ 168 ಸೆಂ.ಮೀ., ತೂಕ-50 ಕೆ.ಜಿ., ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಸ್ವಯಂ ಸೇವಾ ಮನೋಭಾವದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.
ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಅರ್ಜಿಗಳು ದೊರೆಯಲಿವೆ. ಅರ್ಜಿಗಳನ್ನು ಸೆಪ್ಟೆಂಬರ್ 1 ರಿಂದ 9 ರವರೆಗೆ ವಿತರಿಸಲಾಗುವುದು. ಸೆಪ್ಟೆಂಬರ್ 15 ಸಂಜೆ 5.30 ಅರ್ಜಿ ಸಲ್ಲಿಸಲು ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-200311,
ಬೋಧಕರು-9481047857,9663698179ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ತಿಳಿಸಿದ್ದಾರೆ.