Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಇನ್ನರ್‍ವೀಲ್ಹ್ ಕ್ಲಬ್‍ನಿಂದ ಮಹಿಳಾ ಸೇವಾ ಸಮಾಜದಲ್ಲಿರುವ 25 ಅನಾಥ ಮಕ್ಕಳಿಗೆ ರೆಗ್ಜಿನ್ ಪೋಮ್ ಬೆಡ್‍ಗಳ ವಿತರಣೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್.30 : ಒಂದು ವರ್ಷದಲ್ಲಿ ಇನ್ನರ್‍ವೀಲ್ಹ್ ಕ್ಲಬ್‍ನಿಂದ ನೂರ ಐವತ್ತು ಪ್ರಾಜೆಕ್ಟ್‌ಗಳನ್ನು ನೀಡಲಾಗಿದೆ ಎಂದು ಇನ್ನರ್‍ವೀಲ್ಹ್ ಕ್ಲಬ್ ಅಧ್ಯಕ್ಷೆ ಹಾಗೂ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ ಮೋಕ್ಷರುದ್ರಸ್ವಾಮಿ ಹೇಳಿದರು.

ಮಹಿಳಾ ಸೇವಾ ಸಮಾಜದಲ್ಲಿರುವ 25 ಅನಾಥ ಮಕ್ಕಳಿಗೆ ರೆಗ್ಜಿನ್ ಪೋಮ್ ಬೆಡ್‍ಗಳನ್ನು ವಿತರಿಸಿ ಮಾತನಾಡಿದರು.

ಎರಡು ಸರ್ಕಾರಿ ಶಾಲೆಗಳಿಗೆ ನೂರು ಲೀಟರ್ ಸಾಮಥ್ರ್ಯವುಳ್ಳ ಆರ್.ಓ. ವಾಟರ್ ಫಿಲ್ಟರ್, ಬೆಂಚ್, ನೋಟ್‍ಬುಕ್‍ಗಳನ್ನು ವಿತರಿಸಿದ್ದೇವೆ. ಇಬ್ಬರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಕೊಡಲಾಗಿದೆ. ಇದರಿಂದ ಅವರು ಮನೆಯಲ್ಲಿಯೇ ಬಟ್ಟೆಗಳನ್ನು ಹೊಲಿಯುವ ಮೂಲಕ ಸ್ವಾವಲಂಭಿಯಾಗಿ ಬದುಕಲು ನೆರವಾಗಲಿದೆ ಎಂದರು.

ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗಿದೆ.
ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗಿದೆ. ಒಟ್ಟಾರೆ ಒಂದು ವರ್ಷದ ನನ್ನ ಅವಧಿಯಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಆತ್ಮತೃಪ್ತಿಯಿದೆ ಎಂದು ಮೋಕ್ಷರುದ್ರಸ್ವಾಮಿ ತಿಳಿಸಿದರು.

ವೀಣಸ್ವಾಮಿ ಮಾತನಾಡಿ ಇನ್ನರ್‍ವೀಲ್ಹ್ ಕ್ಲಬ್ ಅಧ್ಯಕ್ಷೆ ಶೀಮತಿ ಮೋಕ್ಷರುದ್ರಸ್ವಾಮಿ ಒಂದು ವರ್ಷದ ಅವಧಿಯಲ್ಲಿ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದ್ದಾರೆ. ಮಹಿಳಾ ಸೇವಾ ಸಮಾಜದಲ್ಲಿರುವ 25 ಅನಾಥ ಮಕ್ಕಳಿಗೆ ಗುಣಮಟ್ಟದ ರೆಝ್ಸಿನ್ ಬೆಡ್‍ಗಳನ್ನು ನೀಡಿರುವುದಲ್ಲದೆ ಬಡ ಮಕ್ಕಳಿಗೆ ಪುಸ್ತಕ, ನೋಟ್‍ಬುಕ್‍ಗಳನ್ನು ವಿತರಿಸಿ ಶಿಕ್ಷಣಕ್ಕೆ ನೆರವಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲತಾ ಉಮೇಶ್, ರಾಜೇಶ್ವರಿ ಸಿದ್ದರಾಂ, ನಂದಿನಿಶಿವಪ್ರಕಾಶ್, ಶಿಲ್ಪಜಗದೀಶ್, ಭಾಗ್ಯ ಕುಮಾರ್, ಮಹಾಂತಮ್ಮ, ವಿಜಯ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

error: Content is protected !!