ಚಿತ್ರದುರ್ಗ : ಒಂದೇ ಒಂದು ಕಾಗೆಗೆ ಇಡೀ ಗ್ರಾಮದ ಜನ ಹೆದರುತ್ತಾರೆ ಅಂದರೆ ನಂಬ್ತೀರಾ. ನಂಬಲೇಬೇಕು ಅಂತದೊಂದು ಸ್ಥಿತಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಓಬಳಾಪುರದಲ್ಲಿ ನಡೆಯುತ್ತಿದೆ. ಕಾಗೆಯಿಂದಾಗಿ ಗ್ರಾಮದ ಜನ ಧೈರ್ಯವಾಗಿ ಓಡಾಡುವುದನ್ನೇ ನಿಲ್ಲಿಸಿದ್ದಾರೆ.
ಹೌದು, ನಿಮಗೆ ಇದು ಕೇಳೋದಕ್ಕೆ ವಿಚಿತ್ರವೆನಿಸಿದರೂ ಸತ್ಯ. ಅದು ಕಾಗೆಗಳ ಗುಂಪು ಅಲ್ಲ. ಕೇವಲ ಒಂದೇ ಒಂದು ಕಾಗೆ ಇಡೀ ಊರಿಗೆ ಊರಿಗೆ ಭಯ ತಂದೊಡ್ಡಿದೆ. ಜನ ಒಬ್ಬೊಬ್ಬರೇ ಹೊರಗಡೆ ಹೋಗೋದಕ್ಕೆ ಹೆದರುತ್ತಿದ್ದಾರೆ. ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಲು ಭಯ ಪಡುತ್ತಿದ್ದಾರೆ. ಒಂದು ವೇಳೆ ಎಮರ್ಜೆನ್ಸಿ ಅಂತ ಒಬ್ಬೊಬ್ಬರೆ ಓಡಾಡಿದ್ರೆ ಆ ಒಂಟಿ ಕಾಗೆ ಅವರ ಮೇಲೆ ಅಟ್ಯಾಕ್ ಮಾಡೋದು ಗ್ಯಾರಂಟಿ.
ಕೆಲವರ ತಲೆಗೆ ಕುಕ್ಕಿ ಗಾಯವನ್ನು ಮಾಡಿದೆ. ಒಂಟಿ ಕಾಗೆ ಇಷ್ಟೆಲ್ಲ ಅವಾಂತರ ಮಾಡೋದಕ್ಕೆ ಕಾತಣವೆನೆಂದು ಗ್ರಾಮದ ಜನರು ಯಾರನ್ನೋ ಕೇಳಿದಾಗ. ಇದು ಆಂಜನೇಯ ಶಾಪವೆಂದು ಹೇಳಿದ್ದಾರಂತೆ. ಕಳೆದ ಹತ್ತು ವರ್ಷಗಳ ಹಿಂದೆ ಆಂಜನೇಯನ ಪ್ರಾಣ ಪ್ರತಿಷ್ಠಾಪನೆಗೆ ಕೈ ಹಾಕಿದ್ದರಂತೆ. ಆದ್ರೆ ಈಗ ಆಂಜನೇಯನ ದೇವಸ್ಥಾನ ಪಾಳು ಬಿದ್ದಿದೆ. ಇದರಿಂದಲೇ ಊರಿಗೆ ಈ ರೀತಿ ಆಗ್ತಾ ಇರೋದು ಎನ್ನಲಾಗಿದೆಯಂತೆ. ಕಾಗೆಯ ಕಾಟವೂ ಅದಕ್ಕೆ ಶುರುವಾಗಿದೆಯಂತೆ. ಆದ್ರೆ ಇದು ನಿನ್ನೆ ಮೊನ್ನೆಯದ್ದಲ್ಲ. ಸುಮಾರು ಆರು ತಿಂಗಳಿಂದ ಕಾಗೆ ಕಾಟ ಕೊಡ್ತಾ ಇದೆಯಂತೆ ಅದ್ಯಾವಾಗ ಕಾಗೆ ಕಾಟ ತಪ್ಪುತ್ತೋ ಅಂತ ಗ್ರಾಮಸ್ಥರು ಕಾಯ್ತಾ ಇದ್ದಾರೆ.