ಚಿತ್ರದುರ್ಗ | ಜಿಲ್ಲೆಯಲ್ಲಿ ಬೆಳೆ ಹಾನಿ: ರೂ.62.86 ಕೋಟಿ ಬಿಡುಗಡೆ

suddionenews
1 Min Read

ಚಿತ್ರದುರ್ಗ, (ಡಿಸೆಂಬರ್.10) : ಜಿಲ್ಲೆಯಲ್ಲಿ 2021-22ನೇ ಸಾಲಿನ ನವೆಂಬರ್ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ ಆಗಿದ್ದು, ಬೆಳೆ ಹಾನಿಯ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯಯನ್ನು ಮುಗಿಸಿದೆ.

ಜಿಲ್ಲೆಯಾದ್ಯಂತ ಶೇಂಗಾ ಬೆಳೆಯಲ್ಲಿ ಒಟ್ಟು 56119 ಹೆಕ್ಟೇರ್, ರಾಗಿ ಬೆಳೆಯಲ್ಲಿ 19030 ಹೆಕ್ಟೇರ್, ಕಡಲೆ ಬೆಳೆಯಲ್ಲಿ 15307 ಹೆಕ್ಟೇರ್, ಮೆಕ್ಕೆಜೋಳದಲ್ಲಿ 1979 ಹೆಕ್ಟೇರ್ ಹಾಗೂ ಇತರೆ ಬೆಳೆಗಳಲ್ಲಿ 870.40 ಹೆಕ್ಟೇರ್‍ಗಳಂತೆ ಒಟ್ಟು 93305.40 ಹೆಕ್ಟೇರ್‍ಗಳಷ್ಟು ಬೆಳೆಹಾನಿಯಾಗಿರುವುದು ವರದಿಯಾಗಿದೆ.

ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 02ರಂದು ಮೊದಲನೇ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ 13813 ರೈತ ಫಲಾನುಭವಿಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮುಖಾಂತರ ಒಟ್ಟು ಮೊತ್ತ ರೂ.9.29 ಕೋಟಿ ಬಿಡುಗಡೆಯಾಗಿರುತ್ತದೆ. 2ನೇ ಹಂತವಾಗಿ 20734 ರೈತ ಫಲಾನುಭವಿಗಳಿಗೆ ರೂ.13.88 ಕೋಟಿ ಬಿಡುಗಡಯಾಗಿರುತ್ತದೆ.

ಮುಂದುವರೆದು ಮೂರನೇ ಹಂತವಾಗಿ 57369 ಫಲಾನುಭವಿಗಳಿಗೆ ರೂ.39.69 ಕೋಟಿಯನ್ನೊಳಗೊಂಡಂತೆ ಇಲ್ಲಿಯವರೆಗೆ ಒಟ್ಟು 91916 ಫಲಾನುಭವಿಗಳಿಗೆ ಒಟ್ಟು ಮೊತ್ತ ರೂ.62.86 ಕೋಟಿ ಬಿಡುಗಡೆಯಾಗಿರುತ್ತದೆ.

ಉಳಿದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಡಾ; ಟಿ. ರಮೇಶ್‍ಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *