ಚಿತ್ರದುರ್ಗ | ನಾಳೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಸಮಾವೇಶ

1 Min Read

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 06 : ಕರ್ನಾಟಕ ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯಾದ್ಯಂತ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿವೆ. ಜಿಲ್ಲೆಯಾದ್ಯಂತ 1152 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ.

ಇದನ್ನು ವಿರೋಧಿಸಿ ನಾಳೆ (8 ಮಾರ್ಚ್ 2026ರಂದು) ನಗರದ ರೈತ ಭವನದಲ್ಲಿ (ಎಪಿಎಂಸಿ ರಸ್ತೆ), ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳು ಪೋಷಕರು ಹಾಗೂ ಗ್ರಾಮಸ್ಥರು ಸಮಾವೇಶದಲ್ಲಿ ಭಾಗವಹಿಸುತ್ತಾರೆ. ನಗರದ ಶಿಕ್ಷಣ ತಜ್ಞರು, ವಿವಿಧ ಸಂಘಟನೆಗಳ ನಾಯಕರು ಸೇರಿದಂತೆ ಅನೇಕರು ಸಮಾವೇಶದಲ್ಲಿ ಉಪಸ್ಥಿತರಿರುತ್ತಾರೆ.

ಸರ್ಕಾರಿ ಶಾಲೆಗಳನ್ನು ಉಳಿಸಲು ಆಗ್ರಹಿಸಿ ನಡೆಯುತ್ತಿರುವ ಈ ಜಿಲ್ಲಾ ಮಟ್ಟದ ಸಮಾವೇಶಕ್ಕೆ ನಿಮ್ಮ ಮಾಧ್ಯಮ ಪ್ರತಿನಿಧಿಗಳನ್ನು ಕಳುಹಿಸಿ ಕಾರ್ಯಕ್ರಮದ ವರದಿ ಮಾಡಬೇಕೆಂದು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ.

ಜೆ.ಯಾದವ್ ರೆಡ್ಡಿ, ನಿವೃತ್ತ ಪ್ರಾಂಶುಪಾಲರು ಹಾಗೂ ಪ್ರಗತಿಪರ ಚಿಂತಕರು, ಚಿತ್ರದುರ್ಗ ಮತ್ತು ಜಿ.ಎನ್. ಮಲ್ಲಿಕಾರ್ಜುನಪ್ಪ, ನಿವೃತ್ತ ಪ್ರಾಂಶುಪಾಲರು ಹಾಗೂ ಆರ್ಥಿಕ ತಜ್ಞರು, ಚಿತ್ರದುರ್ಗ ಇವರು ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸುವರು.

ಮುಖ್ಯ ಭಾಷಣಕಾರರಾಗಿ ಸುಭಾಷ್ ಬೆಟ್ಟದಕೊಪ್ಪ, ರಾಜ್ಯ ಖಜಾಂಚಿಗಳು, ಎಐಡಿಎಸ್ ಮತ್ತು ಮಹಾಂತೇಶ ಬಿಳೂರ್, ರಾಜ್ಯ ಕಚೇರಿ ಕಾರ್ಯದರ್ಶಿಗಳು, ಎಐಡಿಎಸ್ಓ, ಜಯಣ್ಣ ರಾಜ್ಯ ಉಪಾಧ್ಯಕ್ಷರು, ಎಐಡಿವೈಓ  ರವಿಕುಮಾರ್, ಜಿಲ್ಲಾ ಕಾರ್ಮಿಕ ಮುಖಂಡರು, ಎಐಯುಟಿಯುಸಿ, ಕುಮುದ, ಮಹಿಳಾ ನಾಯಕರು, ಎಐಎಮ್ಎಸ್ಎಸ್ ಇವರು ಮಾತನಾಡಲಿದ್ದಾರೆ. ಕೆ. ಈರಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

Share This Article