Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ ಸಿಟಿ ಇನ್ಸ್ಟ್ಯೂಟ್ : ಕರಡು ಮತದಾರರ ಪಟ್ಟಿ ಪ್ರಕಟ : ಆಕ್ಷೇಪಣೆಗೆ ಅಕ್ಟೋಬರ್ 21 ರ ವರೆಗೂ ಗಡುವು

---Advertisement---

 

ಚಿತ್ರದುರ್ಗ. ಅ.16: ಚಿತ್ರದುರ್ಗ ಸಿಟಿ ಇನ್ಸ್ಟ್ಯೂಟ್ ಆಡಳಿತ ಮಂಡಳಿಯ ಮುಂದಿನ ಐದು (5) ವರ್ಷಗಳ ಅವಧಿಗೆ ಸಾಮಾನ್ಯ ಚುನಾವಣೆಯನ್ನು ನಿಗಧಿಪಡಿಸಬೇಕಾಗಿದ್ದು, ಈ ಚುನಾವಣೆ ಸಂಬಂಧ 2024ರ ಆಗಸ್ಟ್ 31ರ ಅಂತ್ಯಕ್ಕೆ ಇದ್ದಂತೆ ಅರ್ಹ ಹಾಗೂ ಅನರ್ಹ ಸಾಮಾನ್ಯ ಸದಸ್ಯರ ಕರಡುಪಟ್ಟಿ, ಅರ್ಹ ಅಜೀವ ಹಾಗೂ ಅನರ್ಹ ಅಜೀವ ಸದಸ್ಯರ ಕರಡುಪಟ್ಟಿ ಹಾಗೂ ಮತದಾರರ ಪಟ್ಟಿಯನ್ನು ಸಿದ್ದಪಡಿಸುವಾಗ ಪರಿಗಣಿಸದೇ ಇರುವವರ ಪಟ್ಟಿಗಳ ಕರಡು ಮತದಾರರ ಪಟ್ಟಿಗಳನ್ನು ನೋಡಲ್ ಅಧಿಕಾರಿಗಳು ಹಾಗೂ ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕರು ಸಲ್ಲಿಸಿದ್ದು, ಈ ಕರಡು ಮತದಾರರ ಪಟ್ಟಿಯನ್ನು ಚಿತ್ರದುರ್ಗ ಸಿಟಿ ಇನ್ಸ್ಟ್ಯೂಟ್ ಸೂಚನಾ ಫಲಕದಲ್ಲಿ ಅ.07ರಂದು ಪ್ರಕಟಿಸಲಾಗಿದೆ.

ಕರಡು ಮತದಾರರ ಪಟ್ಟಿಗಳಿಗೆ ಆಕ್ಷೇಪಣೆಗಳು ಇದ್ದಲ್ಲಿ, ಆಕ್ಷೇಪಣೆಗಳನ್ನು ಸಮರ್ಥನೀಯ ದಾಖಲೆಗಳೊಂದಿಗೆ ಸಿಟಿ ಇನ್ಸ್ಟ್ಯೂಟ್ ವ್ಯವಸ್ಥಾಪಕರಿಗೆ ಅಥವಾ ಆಡಳಿತಾಧಿಕಾರಿಗಳಿಗೆ ಲಿಖಿತವಾಗಿ ಇದೇ ಅ.21ರ ಸಂಜೆ 5.30 ರೊಳಗೆ ಸಲ್ಲಿಸುವಂತೆ ಚಿತ್ರದುರ್ಗ ಸಿಟಿ ಇನ್ಸ್ಟ್ಯೂಟ್ ಆಡಳಿತಾಧಿಕಾರಿಗಳು ಸೂಚಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...