Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ – ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಶ್ರೀಗಳು ಆಯ್ಕೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.01 :ಡಿಸೆಂಬರ್  30 ಮತ್ತು 31, 2023 ರಂದು ಸಾಣೇಹಳ್ಳಿಯಲ್ಲಿ ಜರುಗುವ ಪ್ರಥಮ ಚಿತ್ರದುರ್ಗ-ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಹೆಸರನ್ನು ಎರಡು ಜಿಲ್ಲೆಗಳ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಅನುಮೋದಿಸಲಾಗಿದೆ.

ಶ್ರೀಗಳು ಸ್ವತಃ ವೈಚಾರಿಕ ಲೇಖಕರಾಗಿ, ನಾಟಕಕಾರರಾಗಿ, ರಂಗ ಸಂಘಟಕರಾಗಿ ರಾಜ್ಯದಲ್ಲಿ ಮನೆಮಾತಾಗಿದ್ದಾರೆ. ಅವರ ನಾಟಕ ಚಟುವಟಿಕೆಗಳು ರಾಜ್ಯ, ದೇಶದ ಗಡಿಗಳನ್ನು ಮೀರಿವೆ. ಸಾಣೇಹಳ್ಳಿ ಪುಟ್ಟ ಗ್ರಾಮವನ್ನು ತಮ್ಮ ರಂಗ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಪಂಡಿತಾರಾಧ್ಯರಿಗೆ ಸಲ್ಲುತ್ತದೆ. ಚಿತ್ರದುರ್ಗ ಜಿಲ್ಲೆಯ ತಳಕು ಮತ್ತು ಬೆಳಗೆರೆ ಸಾಹಿತ್ಯಕ್ಕೆ ಹೆಸರು ಪಡೆದರೆ, ಸಾಣೆಹಳ್ಳಿ ಗ್ರಾಮವು ರಂಗಭೂಮಿ ಚಟುವಟಿಕೆಗೆ ರಾಜ್ಯ ಮತ್ತು ದೇಶದಲ್ಲಿ ಗಮನ ಸೆಳೆದಿದೆ. ಇದರ ಹಿಂದಿನ ಪೂರ್ಣ ಪ್ರಯತ್ನ ಶ್ರೀ ಗಳದ್ದಾಗಿದೆ. ಇವರ ಸಾಹಿತ್ಯ, ರಂಗಭೂಮಿ, ವಚನ ಸಾಹಿತ್ಯ ಪ್ರಸಾರ, ಶಿಕ್ಷಣ, ದಾಸೋಹ ಗಳ ಕೊಡುಗೆಗಳನ್ನು ಸ್ಮರಿಸಿ, ಕಸಾಪದ ಎರಡೂ ಜಿಲ್ಲಾ ಘಟಕಗಳು ಶ್ರೀ ಪಂಡಿರಾಧ್ಯರನ್ನು ಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಘೋಷಿಸಿದೆ.

ಸಮ್ಮೇಳಾನಧ್ಯಕ್ಷರ ಪರಿಚಯ :

50 ಕ್ಕೂ ಹೆಚ್ಚು ಸ್ವತಂತ್ರ ವೈಚಾರಿಕ ಕೃತಿಗಳನ್ನು ರಚಿಸಿದ್ದಾರೆ. 6 ನಾಟಕ ಮತ್ತು 1 ಪ್ರವಾಸ ಕಥನ , ಎರಡು ವಚನಗಳ ಕೃತಿ ಗಳನ್ನು ರಚಿಸಿದ್ದಾರೆ. 2004 ರಲ್ಲಿ ಹೊಸದುರ್ಗದಲ್ಲಿ ಜರುಗಿದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಮೊದಲ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎರಡೂ ಜಿಲ್ಲೆಗಳ ಕಸಾಪದ ಪದಾಧಿಕಾರಿಗಳ ಒಮ್ಮತ ಹಾಗೂ ಸಹಮತದಿಂದ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮತ್ತು ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ  ಹಾಗೂ ಎರಡೂ ಜಿಲ್ಲೆಗಳ ಕಸಾಪ ಪದಾಧಿಕಾರಿಗಳ ಪೂರ್ಣ ಒಮ್ಮತದಿಂದ ಸಮ್ಮೇಳನಾಧ್ಯಕ್ಷರ ಆಯ್ಕೆ ಜರುಗಿದೆ.

1998 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’ ನೀಡಿದ್ದರೆ, 2004 ರಲ್ಲಿ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ‘ಫಾಲ್ ಹ್ಯಾರಿಸ್’ ಪ್ರಶಸ್ತಿ ನೀಡಿದೆ. 2007 ರಲ್ಲಿ ‘ಕೆ ವಿ ಶಂಕರೇಗೌಡ’ ಸೇವಾ ಪ್ರಶಸ್ತಿ, 2010ರಲ್ಲಿ ‘ದುರ್ಗದ ಸಿರಿ’ ಪ್ರಶಸ್ತಿ, 2012ರಲ್ಲಿ ಕುವೆಂಪು ವಿವಿ ‘ಗೌರವ ಡಾಕ್ಟರೇಟ್’ ಪ್ರಶಸ್ತಿ ಹಾಗೂ ಆಳ್ವಾಸ್ ‘ನುಡಿಸಿರಿ’ ಪ್ರಶಸ್ತಿ ಮತ್ತು 2013ರಲ್ಲಿ ದುಬೈ ‘ಶ್ರೀರಂಗ’ ಧ್ವನಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಪಂಡಿತಾರಾಧ್ಯರ ಬಗ್ಗೆ
04.09.1951 ರಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಜನಿಸಿದರು. ಇವರ ಪೂರ್ವಾಶ್ರಮದ ತಂದೆ ನಾಗಯ್ಯ, ತಾಯಿ ಶಿವನಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಹೆಡಿಯಾಲದಲ್ಲಿ, ಪ್ರೌಢಶಿಕ್ಷಣವನ್ನು ಸುಣಕಲ್ಲು ಬಿದರಿಯಲ್ಲಿ, ಕಾಲೇಜು ಶಿಕ್ಷಣವನ್ನು ಸಿರಿಗೆರೆಯಲ್ಲಿ ಪಡೆದರು.

ಮೈಸೂರು ವಿವಿಯಿಂದ 1974 ರಲ್ಲಿ ತತ್ವ ಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪ್ರಥಮ ರ್ಯಾಂಕನ್ನು ಚಿನ್ನದ ಪದಕದೊಂದಿಗೆ ಪಡೆದರು. 1977 ಡಿಸೆಂಬರ್ 25 ರಂದು ಸಾಣೆಹಳ್ಳಿಯ ಪೀಠಾಧ್ಯಕ್ಷರಾದರು.

1987 ರಲ್ಲಿ ಶ್ರೀ ಶಿವಕುಮಾರ ಕಲಾ ಸಂಘವನ್ನು ಸ್ಥಾಪಿಸಿದರು. 1990 ಲ್ಲಿ ಶಿವಸಂಚಾರ ರೆಫರರ್ಟರಿ ಆರಂಭಿಸಿದರು. 2003 ರಲ್ಲಿ ಸಿ.ಜಿ.ಕೆ. ಯವರ ಆಸಕ್ತಿಯಿಂದ 5 ಸಾವಿರ ಆಸನಗಳ ಸಾಮಥ್ರ್ಯದ ಗ್ರೀಕ್ ಮಾದರಿಯ ಸುಸಜ್ಜಿತ ಬಯಲು ರಂಗ ಮಂದಿರ ಸಾಣೇಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿದೆ.  ಕಳೆದ 12 ವರ್ಷಗಳಿಂದ ಶ್ರೀ ಶಿವಕುಮಾರ ಕಲಾಸಂಘ ದ ವತಿಯಿಂದ ಶ್ರೀ ಶಿವಕುಮಾರ ರಂಗ ಪ್ರಶಸ್ತಿ ನೀಡುತ್ತಲಿದೆ. 2007 ರಲ್ಲಿ ಭಾರತ ಸಂಚಾರ, ಶಿವದೇಶ ಸಂಚಾರದ ಮೂಲಕ ಭಾರತಾಧ್ಯಂತ ಪರ್ಯಟನೆ ಮಾಡಿ 21 ರಾಜ್ಯಗಳಲ್ಲಿ ಮರಣವೇ ಮಹಾ ನವಮಿ, ಶರಣ ಸತಿ, ಲಿಂಗಪತಿ, ಜಂಗಮದೆಡೆಗೆ ಸೇರಿದಂತೆ ಶರಣ ತತ್ವ ಪ್ರತಿಪಾದಿಸುವ 10 ನಾಟಕಗಳನ್ನು ಹಿಂದಿ ಅವತರಣಿಕೆಯಲ್ಲಿ ಪ್ರದರ್ಶಿಸಿತು.

ಪ್ರಧಾನಿಗಳ ಮೆಚ್ಚುಗೆ
ವಚನ ಸಂಸ್ಕøತಿ ಅಭಿಯಾನದ ಅಂಗವಾಗಿ 44 ವಚನಗಳನ್ನು ಆದರಿಸಿದ ನೀನಲ್ಲದೆ ಮತ್ತಾರೂ  ಇಲ್ಲವಯ್ಯ(ತುಮ್ಹಾರೆ ಸಿವಾ ಔರ್ ಕೋಯಿ ನಹಿ) ನೃತ್ಯ ರೂಪಕವನ್ನು ರಾಜ್ಯ ಮತ್ತು ದೇಶದೆಲ್ಲೆಡೆ ಪ್ರದರ್ಶನಗೊಂಡಿದೆ. ಶ್ರೀ ಪಂಡಿತಾಧ್ಯರು ಧ್ವನಿ ನೀಡಿ ವಚನಗೀತೆಗಳನ್ನು ಅಳವಡಿಸಿದ ಗೀತ ನಾಟಕಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.  2023 ಈ ಗೀತ ನಾಟಕವು ರಾಜ್ಯ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ 11 ಸಾವಿರ ಕಿ.ಮೀ ಕ್ರಮಿಸಿ ವಚನಗಳ ಸಂದೇಶವನ್ನು ಸುಮಧುರ ಗೀತೆ, ನೃತ್ಯಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿರುವುದು ದೇಶದ ಇತಿಹಾಸದಲ್ಲಿ ಮೈಲುಗಲ್ಲಾಗಿದೆ. ಶುಲ್ಕ ತುಂಬಿ ಪದಕ ಪಡೆಯಬೇಕಾದರೆ ಪದಕವೇ ಬೇಡ ಎಂದರು.

1974 ರಲ್ಲಿ ಮೈಸೂರು  ವಿವಿ ಯಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಕ್ಕೆ ಭಾಜವಾದರು. ಸ್ವಲ್ಪ ಹಣ ನೀಡಿ ಚಿನ್ನದ ಪದದ ಕಡೆಯಿರಿ ಎಂದು ವಿವಿ ಸೂಚಿಸಿತು. ಇದಕ್ಕೆ ಶ್ರೀಗಳು ಹಣ ನೀಡಿ ಪದಕ ಪಡೆಯುವುದಾದರೆ ಅಂತಹ ಪದಕವೇ ಬೇಡ ಎಂದು ಪ್ರತಿಭಟನೆ ಸೂಚಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಶ್ರೀಗಳು ನೇರ ನುಡಿ, ಬಂಢಾಯದ ಮನೋಧರ್ಮ ಹಾಗೂ ಶಿಸ್ತನ್ನು ರೂಢಿಸಿಕೊಂಡಿದ್ದರು.

ಡಾಕ್ಟರೇಟ್ ಪಡೆದರೂ ಡಾ. ಹೆಸರು ಬೇಡ
ಇತ್ತೀಚಿನ ದಿನಗಳಲ್ಲಿ ಗೌರವ ಡಾಕ್ಟರೇಟ್ (ಗೌಡಾ) ಮೌಲ್ಯ ಕಳೆದುಕೊಳ್ಳುತ್ತಿದೆ. ದೇಶದ ಪ್ರತಿಷ್ಠಿತ ವಿವಿ ಯಾದ ಮೈಸೂರು ವಿವಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಹೀಗಿದ್ದರೂ ಶ್ರೀಗಳು ತಮ್ಮ ಯಾವುದೇ ಆಹ್ವಾನ ಪತ್ರಿಕೆಯಲ್ಲಿ ಡಾ. ಎಂದು ನಮೂದಿಬೇಡಿ ಎಂದು ನಯವಾಗಿಯೇ ತಿರಸ್ಕರಿಸುತ್ತಾರೆ.

ಪಂಡಿತಾರಾಧ್ಯರ ಕೃತಿಗಳು
1.ಜೀವನ ದರ್ಶನ- 1985
2.ಬದುಕು- 1990
3.ಕೈ ದೀವಿಗೆ-1988
4.ಹುಟ್ಟು ಸಾವುಗಳ ಮಧ್ಯೆ -1990
5.ಸಮಾಧಿಯ ಮೇಲೆ-1991
6.ಸಮಕಾಲೀನತೆ ಮತ್ತು ವಚನ ಸಾಹಿತ್ಯ- 1992
7.ಸಮರಸ – 1992
8.ಮರುಭೂಮಿ -1993
9.ಕಾಯಕ ದಾಸೋಹ -1994
10.ಹುತ್ತ ಮತ್ತು ಹಾವು – 1994
11.ಆದರ್ಶ ವಾಸ್ತವ – 1995
12.ಜಾಗೃತ ವಾಣಿ -1996
13.ಪ್ರಳಯ ? ಮುಂದೇನು ! 1998
14.ಬದುಕು ಹೀಗೇಕೆ ? – 1999
15.ಜ್ಞಾನ ಪುಷ್ಪ – 1999
16.ಸುಖ ಎಲ್ಲಿದೆ ? -2000
17.ಧರ್ಮಗುರು – 2000
18.ಕನ್ನಡಿ – 2001
19.ಸುಜ್ಞಾನ 2001
20.ಮನಸ್ಸು ಮಲ್ಲಿಗೆಯಾಗಲಿ – 2002
21.ಅಂತರಾಳ – 2005
22.ಶಿವಬೆಳಗು – 2005
23.ಬಾಳ ಬುತ್ತಿ – 2006
24.ಜೇಡರ ದಾಸಿಮಯ್ಯ – 2007
25.ಮಾದಾರ ಚನ್ನಯ್ಯ – 2008
26.ರೊಟ್ಟಿ ಬುತ್ತಿ – 2008
27.ವಚನ ವೈಭವ – 2009
28.ಬಸವ ಧರ್ಮ – 2009
29.ಪ್ರಸ್ತುತ – 2010
30.ವ್ಯಕ್ತಿತ್ವ – 2011
31.ಕಲ್ಯಾಣ – 2012
32.ದಿಟ್ಟ ಹೆಜ್ಜೆಯ ಧೀರ ಪ್ರಭು – 2012
33.ಮನದನಿ – 2012
34.ಸಂಪತ್ತು – 2013
35.ನೋಯದವರೆತ್ತ ಬಲ್ಲರು – 2014
36.ಶರಣ ಸಂಕುಲ – 2015
37.ಆತ್ಮ ವಿಕಾಸದ ಮಾರ್ಗ – 2015
38.ನಡೆ ನುಡಿ ಸಿದ್ದಾಂತ – 2017
39.ಲಿಂಗಾಯತ ಧಮ್ – 2017
40.ವಚನಕಾರರ ಬದ್ಧತೆ – 2018
41.ಮನದ ಮಾತು – 2018
42.ಧರ್ಮ ಜ್ಯೋತಿ – 2018
43.ಸಮ ಸಮಾಜದ ಕನಸು – 2019
44.ಮತ್ತೆ ಕಲ್ಯಾಣದೆಡೆಗೆ – 2019
45.ಶರಣ ಸಂದೇಶ – 2020

ಪಂಡಿತಾರಾಧ್ಯರು ರಚಿಸಿದ ನಾಟಕಗಳು
1.ಅಂತರಂಗ – ಬಹಿರಂಗ – 2000
2.ಸ್ವಾಮಿ ವಿವೇಕಾನಂದ – 2002
3.ಜಂಗಮದೆಡೆಗೆ – 2003
4.ಅಂಕುಶ – 2008
5.ಮೋಳಿಗೆ ಮಾರಯ್ಯ – 2017
6.ಗುರು ಮಾತೆ ಅಕ್ಕನಾಗಲಾಂಬಿಕೆ – 2019

ಪಂಡಿತಾರಾಧ್ಯರ ಪ್ರವಾಸ ಕಥನ
1.ಶಿವಾನುಭವ ಪ್ರವಾಸ – 1997

ಪಂಡಿತರಾಧ್ಯರ ವಚನ ಕೃತಿಗಳು
1.ಒಲಿದಂತೆ ಹಾಡುವೆ – 1996
2.ಅಮೃತ ಬಿಂದು – 2012

ಪ್ರಮುಖ ಪ್ರಶಸ್ತಿಗಳು
1.ಪಾಲ್ ಹ್ಯಾರೀಸ್ ಪ್ರಶಸ್ತಿ
2.ರಾಜ್ಯೋತ್ಸವ ಪ್ರಶಸ್ತಿ
3.ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಷಿಪ್
4.ಕುವೆಂಪು ವಿವಿ ಯ ಗೌರವ ಡಾಕ್ಟರೇಟ್ ಪ್ರಶಸ್ತಿ
5.ಜೋಳದ ರಾಶಿ ದೊಡ್ಡನ ಗೌಡ ಪ್ರಶಸ್ತಿ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!