ಸುದ್ದಿಒನ್, ಚಿತ್ರದುರ್ಗ, ಮೇ. 27 : ನಗರದ ಹೆಸರಾಂತ ‘ಗುರುರಾಜ ಮೆಟಲ್ಸ್ ಗ್ರೂಪ್ಸ್’ ಮಾಲೀಕರಾದ ಎನ್.ರತ್ನಾಕರ ಶೆಟ್ಟಿಯವರು (102 ವರ್ಷ) ಇಂದು (ಮಂಗಳವಾರ) ಸಂಜೆ 4.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಆರು ಮಂದಿ ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಬುಧವಾರ (ಮೇ 28) ಸಂಜೆ 4 ಗಂಟೆಗೆ ನೆರವೇರಲಿದೆ. ಕುಟುಂಬದ ಮೂಲಗಳು ತಿಳಿಸಿವೆ. ಸಂಪರ್ಕ ಸಂಖ್ಯೆ: 94486–65059 (ಆರ್.ಗಿರಿ).




