ಚಿತ್ರದುರ್ಗ | ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಸಿಬಿಸಿಟಿ ಯಂತ್ರ ಉದ್ಘಾಟನೆ

1 Min Read

ಚಿತ್ರರ್ದು, ಏಪ್ರಿಲ್. 04 : ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಿಬಿಸಿಟಿ ಸ್ಕ್ಯಾನ್ ಯಂತ್ರವನ್ನು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಪಿ.ಎಸ್. ಶಂಕರ್, ಡಾ. ಬಸವಕುಮಾರ ಸ್ವಾಮಿಗಳು, ಎಸ್.ಎನ್. ಚಂದ್ರಶೇಖರ್, ಕಾಲೇಜಿನ ಪ್ರಾಚಾರ್ಯರಾದ ಡಾ. ರಘುನಾಥರೆಡ್ಡಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

ಸಿಬಿಸಿಟಿ ಸ್ಕ್ಯಾನ್ ಯಂತ್ರವು ಹಲ್ಲುಗಳು ಮತ್ತು ಮೂಳೆಗಳ 3 ಆಯಾಮದ ನೋಟವನ್ನು ಒದಗಿಸುತ್ತದೆ. ಉತ್ತಮ ಚಿಕಿತ್ಸಾ ಯೋಜನೆಗಾಗಿ ನಿಖರವಾದ ರೋಗ ನಿರ್ಣಯವನ್ನು ಮಾಡಲು ನೆರವಾಗಲಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *