ಚಿತ್ರದುರ್ಗ | ಫೆಬ್ರವರಿ 27 ರಿಂದ ದನಗಳ ಜಾತ್ರೆ

1 Min Read

ಚಿತ್ರದುರ್ಗ. ಫೆ. 19 : ನಗರಕ್ಕೆ ಸಮೀಪದ ಶೀಬಾರದಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವ ಹಾಗೂ ಬಾರಿ ದನಗಳ ಜಾತ್ರೆಯನ್ನು 27.02.2025 ರಂದು ಆಯೋಜಿಸಲಾಗಿದೆ.

ಫೆಬ್ರವರಿ 27 ರಿಂದ ಮಾರ್ಚ್ 14 ರವರೆಗೂ ಬಾರಿ ದನಗಳ ಜಾತ್ರೆ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಹಾಗು ತಮಿಳುನಾಡು, ಆಂಧ್ರಪ್ರದೇಶದಿಂದ ಹಳ್ಳಿಕಾರ್, ಅಮೃತಮಹಲ್, ಸಣ್ಣಮಲ್ಲಿಗೆ, ಗುಜುಮಾವು, ನಾಟಿ ಸೇರಿದಂತೆ ವಿವಿಧ ತಳಿಯ ರಾಸುಗಳು ಸೇರಲಿವೆ. ಈ ಜಾತ್ರೆಗೆ ಸರ್ಕಾರದಿಂದ ಅನುಮತಿಯಿದ್ದು, ಸುತ್ತಮುತ್ತಲ ಜಿಲ್ಲೆಗಳ ರೈತರು ತಮ್ಮ ರಾಸುಗಳೊಂದಿಗೆ ಪಾಲ್ಗೊಂಡು ಸದುಪಯೋಗ ಪಡೆಯಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಾತ್ರೆಯ ಸ್ಥಳದಲ್ಲಿ ನೀರು, ಬೆಳಕು ಮತ್ತು ಪಶುವೈದ್ಯಕೀಯ ಸೌಲಭ್ಯವಿರುತ್ತದೆ. ಜಾತ್ರೆಯಲ್ಲಿ ಹೋಟೆಲ್‍ಗಳು, ತಿಂಡಿ ತಿನಿಸುಗಳ ಅಂಗಡಿಗಳು, ಹೂ ಮಾರುವವರು ಇತ್ಯಾದಿಯವರಿಗೆ ಜಾಗ ನಿಗದಿಪಡಿಸಲಾಗಿದೆ.

 

ಇಚ್ಚೆಯುಳ್ಳವರು ಜಾತ್ರಾಸಮಿತಿಯಲ್ಲಿ ಹೆಸರು ನೊಂದಾಯಿಸಬಹುದಾಗಿದೆ. ಜಾತ್ರೆ ನಡೆಯುವ ಸ್ಥಳದಲ್ಲಿ ಮದ್ಯ ಮಾರಾಟ ಮತ್ತು ಸೇವನೆ, ಮಾಂಸ ಮಾರಾಟ ಮತ್ತು ಸೇವನೆ, ನಿಷೇಧಿಸಲಾಗಿದೆ. ಆಗಮಿಸುವ ಜನರು ಸೌಜನ್ಯದಿಂದ ವ್ಯವಹಾರವನ್ನು ಮಾಡಿಕೊಳ್ಳಬೇಕು. ಯಾವುದೇ ಗಲಾಟೆಗೆ ಅವಕಾಶವಿರುವುದಿಲ್ಲ. ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಶಾಂತಿಯಿಂದ ವರ್ತಿಸಬೇಕು.

ಪ್ರವೇಶ ಶುಲ್ಕ : ರಾಸೊಂದಕ್ಕೆ ರೂ.100.00 ನಿಗದಿಪಡಿಸಲಾಗಿದೆ. ಕೊಳ್ಳುವವರು ಮತ್ತು ಮಾರಾಟ ಮಾಡುವವರು ರಾಸೊಂದಕ್ಕೆ ರೂ.100 ರಂತೆ ನಿಗದಿ ಪಡಿಸಲಾಗಿದೆ ಮತ್ತು ಲೋಡ್ ಮಾಡುವ ವಾಹನಗಳಿಗೆ ಸಣ್ಣ ವಾಹನಗಳಿಗೆ ರೂ.100ಮತ್ತು ಲಾರಿಗಳಿಗೆ ರೂ.200 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು, ಶ್ರೀಮುರುಘಾಮಠ, 9880312595, 9880577376, 9980724365, 8310467509 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ಕೋರಿದೆ.

Share This Article
Leave a Comment

Leave a Reply

Your email address will not be published. Required fields are marked *