ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 06 : ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರ ನಿವಾಸದಲ್ಲಿ ಸೋಮವಾರ ಬಿಜೆಪಿ 47 ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಶ್ಯಾಂಪ್ರಸಾದ್ ಮುಖರ್ಜಿ, ಪಂಡಿತ್ ದೀನ್ದಯಾಳ್ ಉಪಾಧ್ಯರವರು ಸ್ಥಾಪಿಸಿದ ಜನಸಂಘ 1980 ರಲ್ಲಿ ಬಿಜೆಪಿ ಪಕ್ಷವಾಗಿ ಈಗ ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಅಟಲ್ಬಿಹಾರಿ ವಾಜಪೇಯಿ, ಲಾಲ್ಕೃಷ್ಣ ಅಡ್ವಾಣಿರವರು ಬಿಜೆಪಿ ಯನ್ನು ದೊಡ್ಡ ಪಕ್ಷವನ್ನಾಗಿ ಬೆಳೆಸಿದ್ದು, ಈಗಿನ ಪ್ರಧಾನಿ ನರೇಂದ್ರಮೋದಿರವರು ಭಾರತವನ್ನು ಇಡಿ ವಿಶ್ವದಲ್ಲಿಯೇ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆಂದು ಗುಣಗಾನ ಮಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಉಪಾಧ್ಯಕ್ಷರುಗಳಾದ ಡಾ.ಸಿದ್ದಾರ್ಥ, ಶೈಲಜಾರೆಡ್ಡಿ, ಸಂಸ್ಥಾಪನಾ ದಿನಾಚರಣೆಯ ಸಂಚಾಲಕ ಮಾಧುರಿ ಗಿರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ಯಾದವ್, ಜಿ.ಹೆಚ್.ಮೋಹನ್ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ಬೇದ್ರೆ, ಕಾರ್ಯದರ್ಶಿ ಪಾಲಯ್ಯ, ನಗರಾಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ವಿ.ಆರ್.ನಾಗರಾಜ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಿವಣ್ಣಾಚಾರ್, ಸಂಪತ್ಕುಮಾರ್, ಸಿದ್ದಾಪುರ ಸುರೇಶ್, ಎ.ವಿ.ಮಂಜುಳಮ್ಮ, ಬಸಮ್ಮ, ಲೀಲಾವತಿ, ವೀಣ, ದಗ್ಗೆಶಿವಪ್ರಕಾಶ್, ಕಿರಣ್, ಶಂಭು, ವಸಂತ್, ಮಲ್ಲಿಕಾರ್ಜುನ್, ಸಿಂಧುತನಯ, ಉಮ ಇನ್ನು
ಅನೇಕರು ಈ ಸಂದರ್ಭದಲ್ಲಿದ್ದರು.
















