ಚಿತ್ರದುರ್ಗ : ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿಕಲಚೇತನರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಜುಲೈ 27 ರಂದು ನಗರದ “ವಾಸವಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಉದ್ಯೋಗ ಮೇಳಕ್ಕೆ 20ಕ್ಕು ಹೆಚ್ಚು ಕಂಪನಿಗಳಿಂದ ಉದ್ಯೋಗದಾತರು ಬರಲಿದ್ದಾರೆ. ಈ ಉದ್ಯೋಗ ಮೇಳಕ್ಕೆ ಶ್ಯೆಕ್ಷಣಿಕ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಯಾವುದೇ ಪದವಿ ಪಡೆದಿರುವಂತಹ ವಿಕಲಚೇತನ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಸಮರ್ಥನಂ ಅಂಗವಿಕಲರ ಸಂಸ್ಥೆಯು 1997ರಲ್ಲಿ ಸ್ಥಾಪಿತಗೊಂಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಸ್ಥೆಯಾಗಿದೆ. 2030ರ ವೇಳೆಗೆ 10,00,000 ಅಂಗವಿಕಲರು ಮತ್ತು ಹಿಂದುಳಿದವರ ಜೀವನವನ್ನು ಸ್ಪರ್ಶಿಸುವ ದೃಷ್ಠಿಯನ್ನು ಹೋಂದಿರುವಇಂತಹ ಸಂಸ್ಥೆಯನ್ನು ಪರಿಚಯಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಸಮರ್ಥನಂ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ, ಪೌಷ್ಟಿಕ ಆಹಾರ, ವೃತ್ತಿಪರತರಬೇತಿ ಮತ್ತು ಉದ್ಯೋಗ ಆಧಾರಿತ ಪುನರ್ವಸತಿಯನ್ನು ವದಗಿಸುವುದರ ಮೇಲೆ ಕೇಂದ್ರೀಕರಿಸಿದೆ. ಹಾಗೂ ವಿಕಲಚೇತನರ ಮತ್ತು ಹಿಂದುಳಿದವರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ.
ಸಮರ್ಥನಂ ಅಂಗವಿಕಲರ ಸಂಸ್ಥೆಯು “ರಜತ ಮಹೋತ್ಸವ”ದ ನೆನಪಿಗಾಗಿ ಮತ್ತು “ಅಂತರಾಷ್ಟ್ರೀಯ ವಿಕಲಾಂಗ ವ್ಯಕ್ತಿಗಳ ದಿನ”ದ ಅಂಗವಾಗಿ ವಿಕಲಚೇತನರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲು ನಿರ್ದರಿಸಿದ್ದೇವೆ. ಇದರಿಂದ 2022ರ ವೇಳೆಗೆ ಹೆಚ್ಚು ಉದ್ಯೋಗಾರ್ಥಿಗಳಿಗೆ ಉದ್ಯೋಗವನ್ನುಒದಗಿಸುವಂತಹ ಅವಕಾಶ ಸಿಗುತ್ತದೆ. ಈ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹಲವಾರು ವಿಕಲಚೇತನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. ಈ ಮೇಳದಲ್ಲಿ ವಿವಿದ ಶಿಕ್ಷಣ ಪಡೆದಂತಹ (10ರಿಂದ ಸ್ನಾತಕೋತ್ತರ ಪದವಿ) ಸುಮಾರು300ಕ್ಕೂ ಹೆಚ್ಚು ಅರ್ಹ ಉದ್ಯೋಗಾರ್ಥಿಗಳು ಹಾಗೂ20ಕ್ಕೊ ಹೆಚ್ಚು ಉದ್ಯೋಗದಾತರ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ
+91 9148792888 / +91 9148793888 / +91 9148875888 / +91 9480812138
ಇಂತಿ
ಶ್ರೀ ಮೌನೇಶಪ್ಪ. ಡಿ
ಶಾಖೆಯ ಮುಖ್ಯಸ್ಥರು,
ಸಮರ್ಥನಂ ಅಂಗವಿಕಲರ ಸಂಸ್ಥೆ,
ಮದ್ದೀಕೆರಿ ಭಿಮಯ್ಯ ಶಾಲೆ ಪಕ್ಕದಲ್ಲಿ,ಮೋಕ ರಸ್ತೆ,ಗಾಂಧಿನಗರ ಬಳ್ಳಾರಿ.+91 9480812138