ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 14 : ತಾಲ್ಲೂಕಿನ
ದೊಡ್ಡ ಸಿದ್ದವನಹಳ್ಳಿ ಗ್ರಾಮದ ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಆವರಣದಲ್ಲಿ ಭಗವದ್ಗೀತಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ, ಎನ್. ಎಲ್. ವೆಂಕಟೇಶ್ ರೆಡ್ಡಿ ಅವರು ಹಾಗೂ ಸಹ ಕಾರ್ಯದರ್ಶಿ ಶ್ರೀಮತಿ ಸುಹಾಸಿನಿ ವೆಂಕಟೇಶ್ ರೆಡ್ಡಿ ಅವರು ಹಾಜರಿದ್ದು ಮಕ್ಕಳಿಗೆ ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶ್ರೀ ಕೃಷ್ಣ ಹಾಗೂ ರಾಧೆಯ ವೇಷಧರಿಸಿ ಭಗವದ್ಗೀತೆಯ ಕೆಲವು ಪ್ರಮುಖ ಹಾಗೂ ವಿಶೇಷ ಅಧ್ಯಾಯಗಳನ್ನು ಅರ್ಥದೊಂದಿಗೆ ಅಭಿನಯ ಗೀತೆಯ ರೂಪದಲ್ಲಿ ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಕೆಎನ್ ಸ್ವಾಮಿ ಅವರು ICSE ವಿಭಾಗದ ಪ್ರಾಂಶುಪಾಲರಾದ ಶ್ರೀಮತಿ ವಿಜಯಶ್ರೀ ಅವರು, ಮುಖ್ಯ ಶಿಕ್ಷಕರಾದ G ಸುರೇಶ್, ರೂಪ, ಶ್ರೀಯುತ ಪಾಪಯ್ಯ, ಅರ್ಚನಾ ಹಾಗೂ ಇತರರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.