in

ಚಿತ್ರದುರ್ಗ :  ಡಿಸಿಸಿ ಕಚೇರಿಯಲ್ಲಿ ಬಸವಜಯಂತಿ ಆಚರಣೆ

suddione whatsapp group join

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಏ.23) :  ಜಾತ್ಯಾತೀತ ಆಧಾರದ ಮೇಲೆ ಜಿಲ್ಲೆಗೊಂದು ಲಿಂಗಾಯತರಿಗೆ ಟಿಕೇಟ್ ನೀಡಲೇಬೇಕೆಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ವಿರೇಂದ್ರ ಪಪ್ಪಿಯವರಿಗೆ ಪಕ್ಷ ಟಿಕೆಟ್ ನೀಡಿದೆ.

ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ಲಿಂಗಾಯತರು ಮತ್ತು ನಮ್ಮ ಮೇಲೂ ಇದೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಡಿಸಿಸಿ ಕಚೇರಿಯಲ್ಲಿಂದು ಗುರು ಬಸವಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು,ಅನುಭವ ಮಂಟಪದ ಆಧಾರದ ಮೇಲೆ ಅಂಬೇಡ್ಕರ್‍ರವರು ಪಾರ್ಲಿಮೆಂಟ್‍ನ್ನು ನಿರ್ಮಾಣ ಮಾಡಿದರು.

ಇದೇ ರೀತಿ ಬಸವಣ್ಣರವರ ತತ್ವಕ್ಕೂ ಕಾಂಗ್ರೆಸ್ ತತ್ವಕ್ಕೂ ಅವಿನಾವ ಸಂಬಂಧ ಇದೆ. ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಬಸವಣ್ಣನವರು ನೀಡಿದ್ದರು. ಇದೇ ರೀತಿ ನಿಮ್ಮ ಕೈಗಳು ನೀಡುವ ಕೈಗಳಾಗಬೇಕೆ ಹೊರೆತು ಬೇಡುವ ಕೈಗಳಾಗಬಾರದೆಂದಿದ್ದರು.

ಕಾಯಕದಲ್ಲಿ ನಿರತರಾದಾಗ ಪೂಜೆಯನ್ನು ಸಹಾ ಮರೆಯಬೇಕಿದೆ ಎಂದು ಬಸವಣ್ಣ ತಿಳಿಸಿದ್ದಾರೆ. ಬೇರೆಯವರಿಗೆ ಅನ್ಯಾಯ ಮಾಡಬಾರದೆ ಮನಚಚ್ಚುವಂತ ಮಾತುಗಳನ್ನು ಆಡಬಾರದು, ಮೋಸ ಮಾಡಬಾರದು, ದಿನ ಪೂರ್ತಿ ಅನ್ಯಾಯ ಮಾಡಿ ನಂತರ ಪೂಜೆಯನ್ನು ಮಾಡುವುದು ಸರಿಯಲ್ಲ ದಿನ ಪೂರ್ತಿ ಶುದ್ದವಾದ ಮನಸ್ಸಿನಿಂದ ಕಾಯಕವನ್ನು ಮಾಡಬೇಕಿದರೆ ಅದೇ ಪೂಜೆಯಾಗುತ್ತದೆ ಎಂದರು.

ಮುಂದಿನ  ದಿನದಲ್ಲಿ ಬರುವ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸನ್ನದ್ದರಾಗಿರಬೇಕಿದೆ. ಈ ಯುದ್ದದಲ್ಲಿ ಎದುರಾಳಿಯನ್ನು ಸೋಲಿಸಬೇಕಿದೆ. ಮುಂದಿನ 17 ದಿನ ಸರಿಯಾದ ರೀತಿಯಲ್ಲಿ ಕಾರ್ಯವನ್ನು ಮಾಡಿದರೆ ಮುಂದಿನ 5 ವರ್ಷ ನಿರಾಳವಾಗಿ ನಾವುಗಳು ಇರಬಹುದಾಗಿದೆ. ಈ ಬಾರಿ ಕಾಂಗ್ರೆಸ್‍ಗೆ ಉತ್ತಮವಾದ ಭವಿಷ್ಯವಿದೆ. ಮತದಾರರು ಸಹಾ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಲು ಸಜ್ಜಾಗಿದ್ದಾರೆ ಅವುಗಳನ್ನು ಸೆಳೆಯುವ ಕಾರ್ಯ ಪಕ್ಷದ ಕಾರ್ಯಕರ್ತರಿಂದ ಆಗಬೇಕಿದೆ.

ಕಳೆದ ನಮ್ಮ ಸರ್ಕಾರದಲ್ಲಿ 1658 ಭರವಸೆಗಳನ್ನು ಈಡೇರಿಸಿದೆ ಇದ್ದಲ್ಲದೆ ಇನ್ನೂ 15 ರಿಂದ  18 ಭರವಸೆಗಳನ್ನು ಸಹಾ ಕಾಂಗ್ರೆಸ್ ಪಕ್ಷ ಈಡೇರಿಸಿದೆ ಇದರ ಬಗ್ಗೆ ಮತದಾರರಿಗೆ ಮನವರಿಕೆ ಮಾಡಬೇಕಿದೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡುವ ಚುನಾವಣೆಯಲ್ಲಿ ಜಿಲ್ಲವಾರು ಸಮಸ್ಯೆಗಳಿಗೆ ಆದ್ಯತೆಯನ್ನು ನೀಡುವುದರ ಮೂಲಕ ಪ್ರನಾಳಿಕೆಯನ್ನು ನಿರ್ಮಾಣ ಮಾಡಲಾಗಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿಯನ್ನು ನೀಡಲಾಗಿದೆ. ಮೋದಿಯವರು ನಿರುದ್ಯೋಗಿ ಯುವಕರಿಗೆ ಪಕೋಡವನ್ನು ಮಾರಿ ಎಂದಿದ್ದಾರೆ. ಆದರೆ ನಮ್ಮ ಸರ್ಕಾರ ಬಂದರೆ ನಿರುದ್ಯೋಗಿ ಯುವಜನತೆಗೆ ಪ್ರತಿ ಮಾಹೆ ಮಾಸಾಶನವನ್ನು ನೀಡಲಾಗುತ್ತದೆ. ಇದರ ಬಗ್ಗೆ ತಿಳಿಸಿ ಎಂದು ಚಂದ್ರಪ್ಪ ತಿಳಿಸಿದರು.

ಕಳೆದ ಬಾರಿ ಚುನಾವಣೆಯಲ್ಲಿಯೂ ನಮ್ಮ ಪಕ್ಷ ಲಿಂಗಾಯತರಿಗೆ ಟಿಕೆಟ್ ನೀಡಿತ್ತು ಆದರೆ ಲಿಂಗಾಯತರು ಕೈ ಹಿಡಿಯಲಿಲ್ಲ ಈ ಭಾರಿಯೂ ಸಹಾ ನಮ್ಮ ಪಕ್ಷ ಲಿಂಗಾಯತರಿಗೆ ಟಿಕೇಟ್ ನೀಡಿದೆ. ಈ ಭಾರಿಯಾದರೂ ಲಿಂಗಾಯತರು, ಮಠಾಧೀಶರು ನಮ್ಮ ಪಕ್ಷದ ಅಭ್ಯರ್ಥಿಯ ಕೈ ಹಿಡಿಯಬೇಕಿದೆ ಎಂದು ಮನವಿ ಮಾಡಿದ ಚಂದ್ರಪ್ಪರವರು, ಬಸವಣ್ಣರವರ ತತ್ವದ ಆಧಾರದ ಮೇಲೆ ನಮ್ಮ ಪಕ್ಷ ನಡೆಯುತ್ತಿದೆ. ಎಲ್ಲಾ ಸಮಾಜದವರು ಸೇರಿ ಈ ಬಾರಿ ಕಾಂಗ್ರೆಸ್‍ನ್ನು ಗೆಲ್ಲಿಸಬೇಕಿದೆ ಮಾಜಿ ಸಂಸದ ಚಂದ್ರಪ್ಪ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ವಿರೇಂದ್ರ ಪಪ್ಪಿ ಮಾತನಾಡಿ, ಈಗ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ಕಾರ್ಯವನ್ನು ಪ್ರಾರಂಭ ಮಾಡಿದ್ದು 15 ಪಂಚಾಯಿತಿಗಳು ಮುಗಿದೆ ಇನ್ನೂ 10 ಪಂಚಾಯಿತಿಗಳಿವೆ ಅದನ್ನು ಮುಂದಿನ 5 ದಿನದಲ್ಲಿ ಪೂರ್ಣ ಮಾಡಲಾಗುವುದು.

ಏ.27 ಅಥವಾ 28 ರಂದು ನಗರದಲ್ಲಿ ಪ್ರಚಾರ ಕಾರ್ಯವನ್ನು ಪ್ರಾರಂಭ ಮಾಡಲಾಗುವುದು. ಎಲ್ಲರು ಸಹಾ ಮುಂದಾಳತ್ವವನ್ನು ವಹಿಸಬೇಕಿದೆ. ವಾರ್ಡಗಳಿಗೆ ಬಂದಾಗ ಅಲ್ಲಿನ ಮುಖಂಡರು, ಸಾಹಿತಿಗಳು, ರಾಜಕೀಯ ಧುರಿಣರನ್ನು ಭೇಟಿ ಮಾಡಿಸಿ, ಸಣ್ಣ ಪುಟ್ಟ ತಪ್ಪುಗಳಾಗಿವೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಚುನಾವಣೆಯನ್ನು ಮಾಡಿ ಎಂದು ಮನವಿ ಮಾಡಿದರು.

ಮುಂದಿನ 15 ರಿಂದ 20 ದಿನಗಳ ಕಾಲ ನೀವುಗಳು ನನಗಾಗಿ ದುಡಿಯಿರಿ, ಮುಂದಿನ 5  ವರ್ಷ ನಿಮಗಾಗಿ ನಾನು ಯಾವುದೇ ರೀತಿಯ ಬೇಸರವಾಗದಂತೆ ನೋಡಿಕೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲುಸುತ್ತೇವೆ ಎಂದು ಚುನಾವಣೆಯನ್ನು ಎದುರಿಸಿ ಪ್ರಮಾಣಿಕ ಮತ್ತು ಜವಾಬ್ದಾರಿಯುತವಾಗಿ ಕೆಲಸವನ್ನು ಮಾಡಿ ಆಗ ಗೆಲುವು ನಮ್ಮದಾಗುತ್ತದೆ ಎಂದು ವಿರೇಂದ್ರ ಪಪ್ಪಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಜಿಲ್ಲಾಧಕ್ಷ ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಎಐಸಿಸಿಯ ವೀಕ್ಷಕರಾದ ಸಂಜಯದತ್, 2018ರ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನ ಗೌಡ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮುಖಂಡರಾದ ಕುಮಾರ ಗೌಡ, ಲಕ್ಷ್ಮೀಕಾಂತ್, ವೆಂಕಟೇಶ್, ಜಮೀರ್, ಜಾಕೀರ್ ಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಮಂಜಪ್ಪ, ರವಿ ಪೂಜಾರ್, ಶಬ್ಬೀರ್ ಜಯ್ಯಣ್ಣ, ನಾಗರಾಜ್ ಜಾಹ್ನವಿ, ವಿನಯ ಗೋಡೆಮನೆ, ಬಾಲಕೃಷ್ಣ ಯಾದವ್, ಮಲ್ಲಿಕಾರ್ಜನ್ ಕೃಷ್ಣಪ್ಪ ಎನ್.ಡಿ.ಕುಮಾರ್ ರುದ್ರಾಣಿ ಗಂಗಾಧರ್, ಮೀನಾಕ್ಷಿ ಸೇರಿದಂತೆ ಇತರರು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಸವಣ್ಣ ವಚನ ಹಾಗೂ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

ಹುಬ್ಬಳ್ಳಿ‌- ಧಾರವಾಡದ ಜೊತೆಗೆ ಉತ್ತರ ಕರ್ನಾಟಕ ಭಾಗದ ಜವಬ್ದಾರಿಯೂ ಶೆಟ್ಟರ್ ಹೆಗಲಿಗೆ : ರಾಹುಲ್ ಗಾಂಧಿ ನಡುವೆ ಚರ್ಚೆ ಆಗಿದ್ದೇನು..?