Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಬ್ಯಾಂಕ್ ಕಾಲೋನಿ ಅಪಹರಣ ಮತ್ತು ದರೋಡೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಬಡಾವಣೆ ಪೊಲೀಸರು

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ಜು‌.17) : ನಗರದ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ನಜೀರ್ ಅಹಮದ್ ಇಬ್ರಾಹಿಂಸಾಬ್ ಎಂಬುವವರ ಮನೆಗೆ ನುಗ್ಗಿ ಇಬ್ಬರನ್ನು ಅಪಹರಿಸಿ ಮನೆಯಲ್ಲಿದ್ದ ಆಭರಣ ಮತ್ತು 50 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಡಾವಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ನಗರದ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ನಜೀರ್ ಅಹಮದ್ ಇಬ್ರಾಹಿಂಸಾಬ್ ಎಂಬುವವರ ಮನೆಗೆ ನುಗ್ಗಿ ಇಬ್ಬರನ್ನು ಅಪಹರಿಸಿ ಮನೆಯಲ್ಲಿದ್ದ ಆಭರಣ ಮತ್ತು 50 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಡಾವಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

 

ಸೋಮವಾರ ನಗರದ ಎಸ್.ಪಿ. ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಆರೋಪಿಗಳನ್ನು ಬಿಹಾರ ಮೂಲದ
ಮಹಮ್ಮದ್ ಸಾಕೀಬ್ ಆಲಂ ಮತ್ತು ಬೆಂಗಳೂರು ಮೂಲದ ಸಮ್ಮು ಎಂದು ಗುರುತಿಸಲಾಗಿದೆ. ಮತ್ತು ಅವರಿಂದ ಲಕ್ಷಾಂತರ ಮೌಲ್ಯದ ನಗದು ಮತ್ತು ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ : ಜುಲೈ 08 ರಂದು ಬೆಳಗ್ಗೆ
ಸುಮಾರು 09:20 ರ ಸಮಯದಲ್ಲಿ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ನಜೀರ್ ಅಹಮದ್ ಇಬ್ರಾಹಿಂಸಾಬ್ ಅವರ ಮನೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಮೂವರು ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಗೆ ನುಗ್ಗಿ ನಜೀರ್ ಅಹಮದ್ ಮತ್ತು ಆತನ ಕುಟುಂಬದವರನ್ನು ಹೆದರಿಸಿ,
50 ಲಕ್ಷ ಹಣಕ್ಕಾಗಿ ಬೇಡಿಕೆಯನ್ನಿಟ್ಟಿದ್ದಾರೆ.

ಅಷ್ಟೇ ಅಲ್ಲದೇ ‌ಅವರನ್ನು ಮನೆಯ ಬೆಡ್ ರೂಂನಲ್ಲಿ ಕೂಡಿ ಹಾಕಿ ಮನೆಯಲ್ಲಿದ್ದ
ಬಂಗಾರದ ಆಭರಣಗಳನ್ನು ದೋಚಿ, ಹಣಕ್ಕಾಗಿ ಬೇಡಿಕೆಯನ್ನಿಟ್ಟು ಮನೆಯಲ್ಲಿದ್ದ ಸಮೀರ್ ಅಹಮದ್ ಮತ್ತು
ಷಾಜಹಾನ್ ರವರನ್ನು ತಮ್ಮ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ, 50 ಲಕ್ಷ ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ನಜೀರ್ ಅಹಮದ್ ಇಬ್ರಾಹಿಂಸಾಬ್ ರವರು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.

ಈ ದೂರಿನ ಮೇರೆಗೆ ಸುಲಿಗೆಕೋರರು ಮತ್ತು ಅಪಹರಣಕಾರರ ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ,
ಹೆಚ್ಚುವರಿ ಪೊಲೀಸ್ ಅಧೀಕ್ಷಕರರಾದ ಎಸ್.ಜೆ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ
ಉಪವಿಭಾಗದ ಡಿ.ವೈ.ಎಸ್.ಪಿ ಅನಿಲ್‍ಕುಮಾರ್.ಹೆಚ್.ಆರ್, ನೇತೃತ್ವದಲ್ಲಿ  ನಯೀಂ ಅಹಮದ್, ಪೊಲೀಸ್ ವೃತ್ತನಿರೀಕ್ಷಕರು, ಬಡಾವಣೆ ವೃತ್ತ, ರಘು,
ಪಿಎಸ್‍ಐ, ಬಡಾವಣೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಯವರನ್ನು ಒಳಗೊಂಡ ತಂಡವನ್ನು ರಚಿಸಿರುತ್ತಾರೆ.

ಈ ತಂಡವು ಅಪಹರಣ ಮತ್ತು ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ
1) 48,53,900 ರೂಪಾಯಿ ನಗದು ಹಣ.
2) 185.600 ಗ್ರಾಂ ತೂಕದ ಅಂದಾಜು 9,28,000 ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬಂಗಾರದ ಆಭರಣಗಳು.
3) 345 ಗ್ರಾಂ ತೂಕದ ಅಂದಾಜು 74,150 ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬೆಳ್ಳಿಯ ಆಭರಣಗಳು.
4) ಕೃತ್ಯಕ್ಕೆ ಬಳಸಿದ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಅಂದಾಜು 7,30,000/-ರೂ. ಬೆಲೆ ಬಾಳುವ ಕಾರು.
5) ಹಿರಿಯೂರು ನಗರ ಠಾಣೆ ಕೇಸಿಗೆ ಸಂಬಂದಿಸಿದ 762 ಗ್ರಾಂ ತೂಕದ ಅಂದಾಜು 53,340 ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬೆಳ್ಳಿ-ಆಭರಣಗಳು ಸೇರಿದಂತೆ  ಒಟ್ಟು 66,39,390 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಡಾವಣೆ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ ಅವರು ಶ್ಲಾಘಿಸಿರುತ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಜ್ಞಾನಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಗಾಳಿಪಟ ಹಬ್ಬ : ಕಣ್ಮನ ಸೆಳೆದ ವಿವಿಧ ಬಗೆಯ ಗಾಳಿಪಟಗಳು

  ಸುದ್ದಿಒನ್, ಚಿತ್ರದುರ್ಗ, ಜುಲೈ.27 : ಗಾಳಿಪಟಹಬ್ಬ ನಮ್ಮ ಶಾಲೆಯ ವಿಶೇಷ ಹಬ್ಬಗಳಲ್ಲಿ ಒಂದಾಗಿದೆ. ಆಷಾಢ ಶುದ್ಧ ಏಕಾದಶಿಯ ದಿನದಂದು  ದೇಶದ ಅನೇಕ ಭಾಗಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಕಾರ್ಯದರ್ಶಿ ಡಾ.ಕೆ ರಾಜೀವಲೋಚನ್

ಚಿತ್ರದುರ್ಗ | ಎಸ್ ಎಲ್ ವಿ ಶಾಲೆಯಲ್ಲಿ  ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಸುದ್ದಿಒನ್, ಚಿತ್ರದುರ್ಗ : ತಾಲ್ಲೂಕಿನ ಕುರುಬರಹಳ್ಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಶಾಲೆಯಲ್ಲಿ ಶುಕ್ರವಾರ ಹುಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಯಿತು. ಶ್ರೀ ಬಾಲಾಜಿ ಯುವಕರ ಸಂಘ ಹಾಗೂ  ಎಸ್ ಎಲ್

BMW ನಿಂದ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ : ಬೆಲೆ ಕೇಳಿದರೆ ಗಾಬರಿಯಾಗ್ತೀರಿ…!

ಸುದ್ದಿಒನ್ | BMW Electric Scooter:  ದ್ವಿಚಕ್ರ ವಾಹನ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಸಮಯ ಬಂದಿದೆ. BMW ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಅವರ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ BMW CE

error: Content is protected !!