ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 31 : ಜಿಲ್ಲೆಯ ಹೊಳಲ್ಕೆರೆ, ಮೊಳಕಾಲ್ಮೂರನ್ನು ಬರದಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ಮತ್ತು ರಾಜ್ಯ ಸರ್ಕಾರ ಗುಟ್ಕಾವನ್ನು ನಿಷೇಧ ಮಾಡಿರುವ ರೀತಿಯಲ್ಲಿಯೇ ಧೂಮಪಾನ, ಮದ್ಯಪಾನ ಸಹ ಆರೋಗ್ಯಕ್ಕೆ ಹಾನಿಕರ ಅವುಗಳನ್ನು ನಿಷೇಧ ಮಾಡದೆ ಇರುವುದನ್ನು ವಿರೋಧಿಸಿ ಸೆ. 8 ರಂದು ಚಿತ್ರದುರ್ಗ ಬಂದ್ ಮಾಡಲು ತೀರ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಇಂದು ಬೆಳಿಗ್ಗೆ ರೈತ ಸಂಘಟನೆಗಳು ಮತ್ತು ಎಲ್ಲಾ ಪ್ರಗತಿಪರ ಕನ್ನಡ ಹೋರಾಟ ಭೂಮಿ ಮತ್ತು ವಸತಿ ಎಲ್ಲಾ ಸಂಘಟನೆಗಳು ಸೇರಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಚಿತ್ರದುರ್ಗ ಮೊಳಕಾಲ್ಮೂರನ್ನು ಬರದಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ಮತ್ತು ರಾಜ್ಯ ಸರ್ಕಾರ ಗುಟ್ಕಾ ವನ್ನು ನಿಷೇಧ ಮಾಡಿರುವುದು ಅದೇ ರೀತಿ ಧೂಮಪಾನ ಮದ್ಯಪಾನ ಇವು ಸಹ ಆರೋಗ್ಯಕ್ಕೆ ಹಾನಿಕರ ಅವುಗಳನ್ನು ನಿಷೇಧ ಮಾಡದೆ ಇರುವುದನ್ನು ವಿರೋಧಿಸಿ ದಿನಾಂಕ 8.9.2026 ಮಂಗಳವಾರ ಚಿತ್ರದುರ್ಗವನ್ನು ಬೆಳಿಗ್ಗೆ 6 ರಿಂದ ಸಾಯಂಕಾಲ 6 ರವರೆಗೆ ಬಂದ್ ಮಾಡಲು ತೀರ್ಮಾನಿಸಲಾಯಿತು.
ಈ ಬಂದ್‍ಗೆ ಕನ್ನಡಪರ ರೈತಪರ ದಲಿತ ಪರ ಕಾರ್ಮಿಕ ಸಂಘಟನೆಗಳು ಹೋಟೆಲ್ ಮಾಲೀಕರ ಸಂಘ ರೈತ ಸಂಘದ ಒಕ್ಕೂಟಗಳು ರಕ್ಷಣಾ ವೇದಿಕೆಯವರು ವಕೀಲ ಸಂಘದವರು ಮತ್ತು ಅಂಗಡಿ ಮಾಲೀಕರು ಆಟೋ ಸಂಘದವರು ಮತ್ತು ದಲ್ಲಾಳಿ ಅಂಗಡಿ ಮಾಲೀಕರು ಬಸ್ ಮಾಲೀಕರು ಸ್ವಯಂ ಪ್ರೇರಿತರಾಗಿ ಚಿತ್ರದುರ್ಗ ಜಿಲ್ಲೆಯ ರೈತ ಸಂಘದ ಬೆಂಬಲಕ್ಕೆ ಎಲ್ಲಾ ಪ್ರಗತಿಪರ ಸಂಘಟನೆಗಳು ಬೆಂಬಲ ಕೊಡಬೇಕಾಗಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಎಲ್ಲಾ ರೈತ ಪರ ಸಂಘ ಒಕ್ಕೂಟಗಳು. ಪದಾಧಿಕಾರಿಗಳಾದ ರೆಡ್ಡಿಹಳ್ಳಿ ವೀರಣ್ಣ, ಕಬ್ಬಿಗೆರೆ ನಾಗರಾಜ್, .ಡಿ.ಎಸ್ ಹಳ್ಳಿ ಮಲ್ಲಿಕಾರ್ಜುನ್, ಕುಮಾರ್ ಸಮತಳ, ಸತ್ಯಪ್ಪ ಮಲ್ಲಾಪುರ ಸೂರಪ್ಪ ಶೇಖರಪ್ಪ ಚಂದ್ರಪ್ಪ ನಿಂಗರಾಜ್ ಜ್ಯೋತಿ ಪ್ರಕಾಶ್ ಶಿವಣ್ಣ ಸಿದ್ದಣ್ಣ ಕಾಂತರಾಜ್ ವೀರಣ್ಣ ರಾಮ್ ರೆಡ್ಡಿ ರವಿಕುಮಾರ್ ಬಾಗೇನಾಳ ತಿಪ್ಪೇಸ್ವಾಮಿ ಮಾರುತಿ ರಂಗೇಗೌಡ ಕಾಂತರಾಜ್ ಮುದ್ದಾಪುರ ನಾಗಣ್ಣ ಶಾಂತಮ್ಮ ಶಿವಕುಮಾರ್ ಕರಿ ಬಸಣ್ಣ ಮಲ್ಲಿಕಾರ್ಜುನ್ ಕಲ್ಲೇಶ್ ಸದಾಶಿವ ಮಾರುತಿ ಸಂಜೀವಪ್ಪ ಜಯಣ್ಣ ಗುರುಸಿದ್ದಣ್ಣ ಓಬಣ್ಣ ಚಂದ್ರಪ್ಪ ಚೆನ್ನಕೇಶವ ಶೇಖರಪ್ಪ ಕುಮಾರಸ್ವಾಮಿ ವಿಜಯ ಹನುಮಂತಪ್ಪ ಸಿದ್ದಣ್ಣ ಇನ್ನು ಮುಂತಾದವರು ಭಾಗವಹಿಸಿದ್ದರು
















