ಚಿತ್ರದುರ್ಗ | ಕವಾಡಿಗರಹಟ್ಟಿ ಬಳಿ ಹದಗೆಟ್ಟ ರಸ್ತೆ : ಪೊಲೀಸರೊಂದಿಗೆ ವಾಗ್ವಾದ

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 19 : ಕೆಲವೊಂದು ರಸ್ತೆಗಳು ಹದಗೆಟ್ಟು, ಜನರ ಪ್ರಾಣಗಳೇ ಹೋದರು ಸಂಬಂಧಪಟ್ಟವರು ಕ್ಯಾರೆ ಎನ್ನುವುದಿಲ್ಲ. ಆದರೆ ಆ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬ ಬೀದಿಗೆ ಬೀಳುತ್ತದೆ, ನೋವು, ದುಃಖ ಅವರಿಗಾಗುತ್ತದೆ. ಇದೆಲ್ಲ ಹೇಳುವುದಕ್ಕೆ ಕಾರಣ ಕವಾಡಿಗರಹಟ್ಟಿಯ ಪರಿಸ್ಥಿತಿ.

ಹೌದು ಕವಾಡಿಗರಹಟ್ಟಿ ಬಳಿ ಬರುವ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೋಗಿದೆ. ಈ ಹದಗೆಟ್ಟ ರಸ್ತೆಯಲ್ಲಿಯೇ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ಇದರಿಂದ ಅದೆಷ್ಟೋ ಜನ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಆದರೂ ಯಾವುದೂ ಸರಿ ಆಗಿಲ್ಲ. ಅನಾಹುತಗಳಾದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಈ ಅವಸ್ಥೆ ಅಲ್ಲಿನ ಸ್ಥಳೀಯರ ತಲೆ ಕೆಡಿಸಿದೆ. ಅದಕ್ಕೆ ಇಂದು ಕೋಪಗೊಂಡ ಸ್ಥಳೀಯರು ಕವಾಡಿಗರಹಟ್ಟಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಕ್ಕೆ ಶುರು ಮಾಡಿದರು.

ರಸ್ತೆ ತಡೆದ ಹಿನ್ನೆಲೆ ಕವಾಡಿಗರಹಟ್ಟಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ 369 ಅನ್ನು ತಡೆದ ಸ್ಥಳೀಯರ ಪ್ರತಿಭಟನೆ ನಡೆಸುವುದಕ್ಕೆ ಶುರು ಮಾಡಿದರು. ಸ್ಥಳೀಯರು ರಸ್ತೆಗೆ ಅಡ್ಡಲಾಗಿ ಕಲ್ಲು ಹಾಕಿ ರಸ್ತೆ ತಡೆ ಮಾಡಿದರು.
ರಸ್ತೆ ಗುಂಡಿಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಧೂಳಿನಿಂದ ಬಡಾವಣೆ ಜನರಿಗೆ ನರಕಯಾತನೆ ಅನುಭವಿಸುತ್ತಿದ್ದಾರೆ. ಹದಗೆಟ್ಟ ರಸ್ತೆಯಲ್ಲಿ ನಿತ್ಯ ಅಪಘಾತ ನಡೆಯುತ್ತಿವೆ ಎಂದು ಕಿಡಿಕಾರಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕೋಟೆ ಮತ್ತು ಸಂಚಾರಿ ಠಾಣೆ ಪೊಲೀಸರು, ಎಲ್ಲವನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದರು. ಆದರೆ ಕೋಟೆ ಮತ್ತು ಸಂಚಾರಿ ಠಾಣೆ ಪೊಲೀಸರಿಗೆ ಧರಣಿ ನಿರತರು ತರಾಟೆ ತೆಗೆದುಕೊಂಡರು. ಅದರಲ್ಲೂ ಮಹಿಳೆಯೊಬ್ಬರು ಅಧಿಕಾರಿಯನ್ನು ಪ್ರಶ್ನೆ ಮಾಡಿದ ವಿಡಿಯೋ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *