Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಅಳತೆಯಲ್ಲಿ ಮೋಸ ಮಾಡಿದರೆ ಸೂಕ್ತ ಕ್ರಮ : ಹೂ ಬೆಳೆಗಾರರು ಮತ್ತು ವರ್ತಕರ ಸಭೆಯಲ್ಲಿ ನಿರ್ಣಯ

Facebook
Twitter
Telegram
WhatsApp

ಚಿತ್ರದುರ್ಗ. ಜೂನ್.25 : ಚಿತ್ರದುರ್ಗ ಕೃಷಿ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸಗಟು ಹೂವಿನ ಮಾರುಕಟ್ಟೆಯಲ್ಲಿ ಹೂವುಗಳನ್ನು ಮಾರಾಟಕ್ಕಾಗಿ ತರುವ ಹೂ ಬೆಳೆಗಾರರು ಹೂವಿನ ಅಳತೆಯಲ್ಲಿ ರೈತರಿಗೆ ಮೋಸವಾಗುತ್ತಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ದೂರಿಗೆ ಸಂಬಂಧಿಸಿದಂತೆ ಈಚೆಗೆ ಎ.ಪಿ.ಎಂ.ಸಿ. ಕಾರ್ಯದರ್ಶಿ ಬಿ.ಎಲ್.ಕೃಷ್ಣಪ್ಪ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಗುರುಪ್ರಸಾದ್ ಸಮ್ಮುಖದಲ್ಲಿ ಹೂ ಬೆಳೆಗಾರರು ಮತ್ತು ಹೂವಿನ ಸಗಟು ವರ್ತಕರ ಸಭೆ ನಡೆಸಲಾಯಿತು.

ಈ ಹಿಂದೆ ಅನೇಕ ಬಾರಿ ತಿಳಿಸಿದಂತೆ ಹೂವಿನ ಅಳತೆಯಲ್ಲಿ ಯಾವುದೇ ಕಾರಣಕ್ಕೆ ಮೋಸ ಮಾಡದಂತೆ ಕಟ್ಟುನಿಟ್ಟಾಗಿ ಹೂವಿನ ವರ್ತಕರಿಗೆ ತಿಳಿಸಲಾಗಿದ್ದು, ಈ ಸಂಬಂಧ ದೂರುಗಳು ಕಂಡು ಬಂದಲ್ಲಿ ಹೂವಿನ ವರ್ತಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಬಿ.ಎಲ್.ಕೃಷ್ಣಪ್ಪ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ಎಂ.ಗುರುಪ್ರಸಾದ್, ಹೂ ಬೆಳೆಗಾರರು ಹಾಗೂ ಹೂವಿನ ವರ್ತಕರಾದ ತಿರುಮಲ  ಪ್ಲವರ್ ಸ್ಟಾಲ್ ಮಾಲೀಕರು, ಲಕ್ಷ್ಮೀಪ್ರಿಯ ಪ್ಲವರ್ ಸ್ಟಾಲ್ ಮಾಲೀಕರು, ಆದಿಶಕ್ತಿ ಪ್ಲವರ್ ಸ್ಟಾಲ್ ಮಾಲೀಕರು ಸೇರಿದಂತೆ ಸಗಟು ಹೂವಿನ ವರ್ತಕರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಯತ್ನಾಳ್ ಪತ್ರಕ್ಕೆ ಅಮಿತ್ ಶಾ ಸ್ಪಂದನೆ : ಸಿಬಿಐ ಮಧ್ಯಪ್ರವೇಶಿಸಿದರೆ ಯಾರಿಗೆಲ್ಲಾ ಟೆನ್ಶನ್..?

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಫೈಯರ್ ಬ್ರಾಂಡ್ ಅಂತಾನೇ ಹೆಸರು ಮಾಡಿದ್ದಾರೆ. ಒಮ್ಮೊಮ್ಮೆ ತಮ್ಮ ಪಕ್ಷದವರ ಮೇಲೆ ಹೌಹಾರುತ್ತಾರೆ. ಅದರಲ್ಲೂ ಬಿಎಸ್ವೈ ಮೇಲೆ ಆಗಾಗ ಕೆಂಡಕಾರುತ್ತಾ ಇರುತ್ತಾರೆ. ಇದೀಗ ಕೆಲವೊಂದು ಹಗರಣದ

ಮುಂದಿನ 7 ದಿನಗಳ ಕಾಲ ಭರ್ಜರಿ ಮಳೆ : ಶಿವಮೊಗ್ಗ, ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಮುಂದುವರೆದಿದೆ. ರಾಜ್ಯದ ಹಲವೆಡೆ ಮಳೆರಾಯ ಬಿಟ್ಟು ಬಿಡದೆ ಕಾಡುತ್ತಿದ್ದಾನೆ. ರಾಜ್ಯದಲ್ಲಿ ಇನ್ನೂ 7 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಜೋರಾಗುವ

ಸರ್ಕಾರದ ಜವಾಬ್ದಾರಿ ಯುವಕರ ಕಡೆಗಿದೆ, ಚರ್ಚೆಗೆ ಸಿದ್ದ : ನೀಟ್ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಮಾತು

    ದೆಹಲಿ: ಕಳೆದ ವಾರವಷ್ಟೇ ನೀಟ್ ಪರೀಕ್ಷೆ ದಿನಾಂಕ ಮುಂದೂಡಿಕೆಯಾಗಿತ್ತು. ವಿದ್ಯಾರ್ಥಿಗಳೆಲ್ಲ ಪರೀಕ್ಷೆಗೆ ಸಿದ್ಧವಾಗಿ, ಪರೀಕ್ಷಾ ಕೇಂದ್ರಕ್ಕೂ ಪ್ರಯಾಣ ಬೆಳೆಸಿದ್ದರು‌. ಆದರೆ ರಾತ್ರಿ 10 ಗಂಟೆಯ ಸುಮಾರಿಗೆ ಪರೀಕ್ಷೆ ರದ್ದಾದ ಮಾಹಿತಿಯನ್ನು ಕೇಂದ್ರ

error: Content is protected !!