ಚಿತ್ರದುರ್ಗ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

1 Min Read

ಚಿತ್ರದುರ್ಗ. ಆಗಸ್ಟ್. 05: ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನೆ ಕಚೇರಿ ವ್ಯಾಪ್ತಿಯಲ್ಲಿ ಖಾಲಿ ಇರುವ 29 ಅಂಗನವಾಡಿ ಕಾರ್ಯಕರ್ತೆ ಹಾಗೂ 228 ಅಂಗನವಾಡಿ ಸಹಾಯಕಿ ಹುದ್ದೆಗಳು ಸೇರಿ ಒಟ್ಟು 257 ಹುದ್ದೆಗಳನ್ನು ಗೌರವ ಸೇವೆಯ ಆಧಾರದಲ್ಲಿ ನೇಮಕಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ದ್ವೀತಿಯ ಪಿಯುಸಿ ಹಾಗೂ ಸಹಾಯಕಿ ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. 19 ರಿಂದ 35 ವರ್ಷದೊಳಗಿನ ಸ್ಥಳೀಯ ಮಹಿಳಾ ಅಥವಾ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಭರಮಸಾಗರ ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿ 7 ಕಾರ್ಯಕರ್ತೆ, 23 ಸಹಾಯಕಿ ಸೇರಿ 30 ಹುದ್ದೆಗಳು, ಚಿತ್ರದುರ್ಗದಲ್ಲಿ 2 ಕಾರ್ಯಕರ್ತೆ, 9 ಸಹಾಯಕಿ ಸೇರಿ 11 ಹುದ್ದೆಗಳು, ಚಳ್ಳಕೆರೆಯಲ್ಲಿ 2 ಕಾರ್ಯಕರ್ತೆ, 24 ಸಹಾಯಕಿ ಸೇರಿ 26 ಹುದ್ದೆಗಳು, ಹಿರಿಯೂರಿನಲ್ಲಿ 2 ಕಾರ್ಯಕರ್ತೆ, 53 ಸಹಾಯಕಿ ಸೇರಿ 55 ಹುದ್ದೆಗಳು, ಹೊಳಲ್ಕೆರೆಯಲ್ಲಿ 4 ಕಾರ್ಯಕರ್ತೆ, 45 ಸಹಾಯಕಿ ಸೇರಿ 49 ಹುದ್ದೆಗಳು, ಹೊಸದುರ್ಗದಲ್ಲಿ 11 ಕಾರ್ಯಕರ್ತೆ, 53 ಸಹಾಯಕಿ ಸೇರಿ 64 ಹುದ್ದೆಗಳು, ಮೊಳಕಾಲ್ಮೂರು ನಲ್ಲಿ 1 ಕಾರ್ಯಕರ್ತೆ, 21 ಸಹಾಯಕಿ ಸೇರಿ 22 ಹುದ್ದೆಗಳ ನೇಮಕಕ್ಕೆ ಪ್ರಕಟಣೆ ಹೊರಡಿಸಲಾಗಿದೆ.

ಸೆಪ್ಟೆಂಬರ್ 5 ಸಂಜೆ 5:30ರ ಒಳಗಾಗಿ ವೆಬ್‌ಸೈಟ್  https://karnemakaone.kar.inc.in/abcd/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಬಳಕೆದಾರರ ಕೈಪಿಡಿಯಲ್ಲಿನ ಸೂಚನೆಗಳನ್ನು ಸ್ಪಷ್ಟಾವಾಗಿ ಓದಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *