ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 06 : ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಹಾಗೂ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿರುವ ಗಿಡ-ಮರಗಳನ್ನು ಕಡಿದು ಪರಿಸರ ನಾಶ ಮಾಡುವುದನ್ನು ವಿರೋಧಿಸಿ ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜು ಎದುರಿನ ಆವರಣದಲ್ಲಿ ಮಹಿಳಾ ಕಾಲೇಜು ಕಟ್ಟುವುದಕ್ಕಾಗಿ ಕಡಿಯಲಾಗಿರುವ ಮರದ ಬೇರೊಂದನ್ನು ಧರಣಿಯ ಸ್ಥಳದಲ್ಲಿರಿಸಿ ಹುತಾತ್ಮ ಮರವೆಂದು ಪೂಜಿಸಿ ಪುಷ್ಪ ನಮನ ಗೈಯುವ ಮೂಲಕ ಗಿಡ-ಮರಗಳನ್ನು ಕಡಿಯದಂತೆ ಅಧಿಕಾರಿಗಳನ್ನು ಒತ್ತಾಯಿಸಿ ಧರಣಿÂನಿರತರು ಮನವಿ ಅರ್ಪಿಸಿದರು.
ಪರಿಸರ ಪ್ರೇಮಿ ಹೆಚ್.ಎಸ್.ಕೆ.ಸ್ವಾಮಿ, ನಾಗರಾಜ್ಬೇದ್ರೆ, ಎಸ್.ಲಕ್ಷ್ಮಿಕಾಂತ್, ಡಾ.ನಟರಾಜ್, ನ್ಯಾಯವಾದಿಗಳಾದ ದಿಲ್ಶಾದ್, ಸೈಯದ್ ಸ್ವಾಲೇಹ, ರೈತ ಮುಖಂಡ ಕಸವನಹಳ್ಳಿ ರಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನಿವೃತ್ತ ಪಿ.ಎಸ್.ಐ. ನಾಗರಾಜ್, ಇನ್ನರ್ವೀಲ್ ಚಿತ್ರದುರ್ಗ ಫೋರ್ಟ್ನ ಜಾನ ಚಂದ್ರಕಲಾ, ಪದ್ಮಾವತಿ, ಎಂ.ಬಿ.ಜಯದೇವಮೂರ್ತಿ ಇನ್ನು ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.
















