ಚಿತ್ರದುರ್ಗ. ಏ.16:ಚಿತ್ರದುರ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಯೂನಿಯನ್ ಪಾರ್ಕ್ ಬಳಿ, ಪುಟ್ಪಾತ್ ಮೇಲೆ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತ ವ್ಯಕ್ತಿಯು 55 ರಿಂದ 60 ವರ್ಷದವರಾಗಿದ್ದು, ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, ಧೃಡಕಾಯ ಶರೀರ ಹೊಂದಿದ್ದು, ತಲೆಯಲ್ಲಿ ಬಿಳಿ ಕೂದಲು, ಮುಖದ ಮೇಲೆ ಕುರುಚಲ ಬಿಳಿ ಗಡ್ಡ ಮೀಸೆ ಇರುತ್ತದೆ. ಊಟೋಪಚಾರ ಅಥವಾ ಖಾಯಿಲೆಯಿಂದ ವ್ಯಕ್ತಿಯು ಮೃತಪಟ್ಟಿದ್ದು, ವ್ಯಕ್ತಿಯ ಗುರುತು ಪತ್ತೆಯಾಗಿರುವುದಿಲ್ಲ. ಮೃತ ದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ವ್ಯಕ್ತಿಯ ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.



