Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಚಳ್ಳಕೆರೆ ಅಪಘಾತ | ತನ್ನದೇ ಟ್ರಾಕ್ಟರ್ ನ ಚಕ್ರದಡಿಗೆ ಸಿಲುಕಿ ಚಾಲಕ ಸಾವು

---Advertisement---

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.20 : ಜಲ್ಲಿ ಕಲ್ಲು ತುಂಬಿದ್ದ ಟ್ರಾಕ್ಟರ್ ಹರಿದು ಅದೇ ಟ್ರಾಕ್ಟರ್ ನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ಸಂಭವಿಸಿದೆ.

ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಚಿಕ್ಕಮಧುರೆ ಗ್ರಾಮದ ಬಸವರೆಡ್ಡಿ (50) ಮೃತಪಟ್ಟ ಟ್ರಾಕ್ಟರ್ ಚಾಲಕ. ಲಕ್ಷ್ಮಿಪುರ ಗ್ರಾಮಕ್ಕೆ ಜಲ್ಲಿ ಪುಡಿ ಅನ್ ಲೋಡ್ ಮಾಡಲು ಹೋದಾಗ ರಸ್ತೆಗೆ ಅಡ್ಡಲಾಗಿ ಬೈಕ್ ನಿಂತಿತ್ತು. ಯಾರೂ ಇಲ್ಲದೆ ಕಾರಣ ಚಾಲಕನೇ ಟ್ರಾಕ್ಟರ್ ನಿಂದ ಇಳಿದು ಅಡ್ಡ ಇದ್ದ ಬೈಕ್ ತೆಗೆಯಲು ಹೋದಾಗ ತನ್ನದೇ ಟ್ರಾಕ್ಟರ್ ಇಳಿಜಾರು ಇದ್ದ ಕಾರಣ ಇದ್ದಕ್ಕಿದ್ದಂತೆ ನ್ಯೂಟ್ರಲ್ ಆಗಿ ಬೈಕ್ ತೆಗೆಯುತ್ತಿದ್ದ ಟ್ರಾಕ್ಟರ್ ಚಾಲಕ ಬಸವರೆಡ್ಡಿ ಮೇಲೆ ಹರಿದಿದೆ.

ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಹಾಗೂ ವೃತ್ತ ನಿರೀಕ್ಷಕ ದೇಸಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join WhatsApp

Join Now

Join Telegram

Join Now

Leave a Comment