ಚಿತ್ರದುರ್ಗ : ಪ್ರಕೃತಿ ಶಾಲೆಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ನಗರದ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲೆಯ ಅಧ್ಯಕ್ಷರಾದ ರೋಟೇರಿಯನ್ ಎಂ.ಕೆ. ರವೀಂದ್ರ ಡಿಸ್ಟ್ರಿಕ್ಟ್ ಗೌರ್ನರ್ ಡಿಸ್ಟ್ರಿಕ್ಟ್ ಆರ್ ಐ 3160 ರವರು ಧ್ವಜಾರೋಹಣವನ್ನು ಮಾಡಿದರು. ಸ್ವಾತಂತ್ರ್ಯ ಹೋರಾಟಗಾರ ಬಲಿದಾನವನ್ನು ನೆನೆಸುತ್ತಾ ನಮ್ಮ ದೇಶವು ಪ್ರಗತಿಪದ್ಧದಲ್ಲಿ ಸಾಗುತ್ತಿದೆ ಎಂದು ಮಕ್ಕಳಿಗೆ ತಿಳಿಸಿದರು.

ಒಂದು ಮತ್ತೆ ಎರಡನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಮಾಡಿದರು. 4 ನೇ ತರಗತಿ ವಿದ್ಯಾರ್ಥಿಯಾದ ಭಾನುಪ್ರಿಯ ಟಿ. ಅಧ್ಯಕ್ಷರಿಗೆ ತಮ್ಮ ಪಥಸಂಚಲನದ ತಂಡದ ಪರಿಚಯವನ್ನು ಮಾಡಿಕೊಟ್ಟರು.
ನಾಲ್ಕನೇ ತರಗತಿಯ ವಿದ್ಯಾರ್ಥಿ ಗಳು ಪಥಸಂಚಲನವನ್ನು ಮಾಡಿದರು. ಶಾಲೆಯ ಅಧ್ಯಾಪನ ಮಕ್ಕಳು ರಾಷ್ಟ್ರೀಯ ಹೋರಾಟಗಾರರ ವೇಷಭೂಷಣ ಸ್ಪರ್ಧೆಯನ್ನು ಮಾಡಿದರು.
ಈ ಮಕ್ಕಳಿಗೆ ಪಾರಿತೋಷಕವನ್ನು ವಿತರಿಸಲಾಯಿತು.
ಪ್ಲೇ ಹೋಂ ಮಕ್ಕಳು ನಮ್ಮ ರಾಷ್ಟ್ರದ ವಿವಿಧ ಚಿನ್ಹೆಯನ್ನು ಗುರುತಿಸಿದರು. ವಿಶೇಷವಾಗಿ ಪ್ರತಿ ತಿಂಗಳು ಶೇಖಡ ನೂರರಷ್ಟು ಹಾಜರಾತಿ ಯಾದ ವಿದ್ಯಾರ್ಥಿಗಳಿಗೆ ಹಾಜರಾತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿದ್ಯಾರ್ಥಿಯಾದ ಮೊಹಮ್ಮದ್ ಅರ್ಬಾದ್ ಹಿಂದಿ ಭಾಷಣವನ್ನು ಮತ್ತು ಭುವನ,ಟಿ ಕನ್ನಡ ಭಾಷಣವನ್ನು ಮಾಡಿದರು.
ಐದು ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ನೃತ್ಯವನ್ನು ಮಾಡಿದರು.

ಕಾರ್ಯದರ್ಶಿಗಳಾದ ಕಾರ್ತಿಕ್. ಎಂ ಅವರು ವಂದನಾಪಣೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಧನ್ಯ ಎಲ್. ನಾಯ್ಡು ಸಂಜನಾ ಎಸ್ ತನೋಜ್ ಕುಮಾರ್ ಪಲ್ಲವಿ ಪಿ.ವಿ ಕೃತಿಕ ವಿ ಮಾಡಿದರು. ಶಾಲೆಯ ಎಲ್ಲಾ ಟ್ರಸ್ಟ್ ಗಳು ಮತ್ತು ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ನಂದ ಟಿ ಎಲ್ಲ ಶಿಕ್ಷಕ ವರ್ಗದವರು ಮತ್ತು ಪೋಷಕರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *