Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಜಿಲ್ಲೆಯಾದ್ಯಂತ ಮಳೆಗೆ 48 ಮನೆಗಳು ಹಾನಿ : ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

Facebook
Twitter
Telegram
WhatsApp

ಚಿತ್ರದುರ್ಗ. ಅ.21: ಭಾನುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 14.3 ಮಿ.ಮೀ ಮಳೆಯಾಗಿದೆ.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 7.5 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 18.5 ಹಿರಿಯೂರು ತಾಲ್ಲೂಕು 25.1 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 13.9 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 25.1 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 4.2 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 2 ಮಿ.ಮೀ, ನಾಯಕನಹಟ್ಟಿ 22.3 ಮಿ.ಮೀ, ಪರಶುರಾಂಪುರ 1.3 ಮಿ.ಮೀ, ತಳಕು 7.4 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 11.5 ಮಿ.ಮೀ, ಭರಮಸಾಗರ 33.9 ಮಿ.ಮೀ, ಹಿರೇಗುಂಟನೂರು 15.5 ಮಿ.ಮೀ, ತುರುವನೂರು 16.4 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರು 22.5 ಮಿ.ಮೀ,  ಐಮಂಗಲ 8.3 ಮಿ.ಮೀ, ಧರ್ಮಪುರ 3.3 ಮಿ.ಮೀ, ಜವನಗೊಂಡನಹಳ್ಳಿ 3.6 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 31.1 ಮಿ.ಮೀ, ಬಿ.ದುರ್ಗ 32.6 ಮಿ.ಮೀ, ರಾಮಗಿರಿ 31.3 ಮಿ.ಮೀ, ತಾಳ್ಯ 10.8 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 13.5 ಮಿ.ಮೀ, ಮಾಡದಕೆರೆ 15.9 ಮಿ.ಮೀ, ಮತ್ತೋಡು 16.2 ಮಿ.ಮೀ, ಶ್ರೀರಾಂಪುರ 10.2 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 29.9 ಮಿ.ಮೀ ಹಾಗೂ ದೇವಸಮುದ್ರದಲ್ಲಿ 19.8 ಮಿ.ಮೀ ಮಳೆಯಾಗಿದೆ.

48 ಮನೆಗಳು ಭಾಗಶಃ ಹಾನಿ:  ಭಾನುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 48 ಮನೆಗಳು ಭಾಗಶಃ ಹಾನಿಯಾಗಿದ್ದು, 18 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, ಒಂದು ದೊಡ್ಡ ಜಾನುವಾರು ಹಾನಿ ಹಾಗೂ 2 ಹೆಕ್ಟೇರ್ ಕೃಷಿ ಬೆಳೆ ಹಾಗೂ 1 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 6 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ 10 ಮನೆಗಳು ಹಾಗೂ 1 ದೊಡ್ಡ ಜಾನುವಾರು ಹಾನಿ, 12 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, 1 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 2 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.

ಹೊಳಲ್ಕೆರೆ 18 ಮನೆಗಳು, ಹೊಸದುರ್ಗ 2 ಮನೆಗಳು ಭಾಗಶಃ ಹಾನಿ ಹಾಗೂ 1 ಮನೆಗೆ ನೀರು ನುಗ್ಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 8 ಮನೆಗಳು ಭಾಗಶಃ ಹಾನಿ ಹಾಗೂ 5 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ  ವರದಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | 26 ವರ್ಷಗಳ ಬಳಿಕ ಗುರು – ಶಿಷ್ಯರ ಸಮ್ಮಿಲನ : ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಂದನೆ ಕಾರ್ಯಕ್ರಮ!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 21 : ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ 1996-97 ಹಾಗೂ 1997 – 98 ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ಗುರು ಶಿಷ್ಯರ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡದೆ ಇರೋದಕ್ಕೆ ಕಾರಣವೇನು ಗೊತ್ತಾ..?

ಬೆಂಗಳೂರು : ರಾಜ್ಯದಲ್ಲಿ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಅಖಾಡ ರಂಗೇರಿದೆ. ಅದರಲ್ಲೂ ಚನ್ನಪಟ್ಟಣ ಅಖಾಡದತ್ತ ಎಲ್ಲರ ಚಿತ್ತ ನೆಟ್ಟಿದೆ. ಜೆಡಿಎಸ್ ಚಿಹ್ನೆ ಹಿಡಿದು ಸ್ಪರ್ಧಿಸುವಂತೆ ಹೇಳಿದರೂ ಸಿಪಿ ಯೋಗೀಶ್ವರ್ ಸಾಧ್ಯವಿಲ್ಲ ಎಂದಿದ್ದಾರೆ. ನಿಂತರೆ

ಹಿರಿಯೂರು | ಗೋಡೆ ಕುಸಿದು ವೃದ್ದೆ ಸಾವು

  ಸುದ್ದಿಒನ್, ಹಿರಿಯೂರು, ಅಕ್ಟೋಬರ್. 21 : ನಿರಂತರ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ತಾಲ್ಲೂಕಿನ ಧರ್ಮಪುರ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ವಾಸಿ ಮೀನಾಕ್ಷಮ್ಮ (63 ವರ್ಷ) ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

error: Content is protected !!