ಚಿತ್ರದುರ್ಗ(ಮಾ.11): ನಗರದ ಎಸ್.ಜೆ.ಎಂ. ದಂತವೈದ್ಯಕೀಯ ಕಾಲೇಜಿಗೆ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವತಿಯಿಂದ ನಡೆದ 2021-22ನೇ ಸಾಲಿನ ದಂತವೈದ್ಯಕೀಯ ಪರೀಕ್ಷೆಯಲ್ಲಿ 4 ರ್ಯಾಂಕ್‍ಗಳು ಲಭಿಸಿವೆ.
ಡಾ|| ಪ್ರೀತಿ ಪಿಸ್ಸೆ ಅಂತಿಮ ವರ್ಷದ ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಗಳಿಸಿದ್ದು, ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರಿ-ಕ್ಲಿನಿಕಲ್, ಕನ್ಸರ್‍ವೇಟಿವ್ ವಿಭಾಗದಲ್ಲಿ 1ನೇ ರ್ಯಾಂಕ್, ಪೆರಿಯೋಡೆಂಟಲಾಜಿ ವಿಭಾಗದಲ್ಲಿ 2ನೇ ರ್ಯಾಂಕ್, ಪ್ರಾಸ್ಥೋಡೆಂಟಿಕ್ ವಿಭಾಗದಲ್ಲಿ 5ನೇ ರ್ಯಾಂಕ್, ಕನ್ಸರ್‍ವೇಟಿವ್ ಡೆಂಟಿಸ್ಟ್ರಿ ವಿಭಾಗದಲ್ಲ್ಲಿ 1ನೇ ರ್ಯಾಂಕ್ ಹಾಗೂ ಓರಲ್ ಮತ್ತು ಮ್ಯಾಕ್ಸಿಲೋಪೇಷಿಯಲ್ ವಿಭಾಗದಲ್ಲಿ 9ನೇ ರ್ಯಾಂಕ್ ಗಳಿಸಿದ್ದಾಳೆ.
ಅಂತಿಮ ವರ್ಷದ 19 ವಿದ್ಯಾರ್ಥಿಗಳು ಮತ್ತು ದ್ವಿತೀಯ ವರ್ಷದ 50 ವಿದ್ಯಾರ್ಥಿಗಳು ವಿಷಯವಾರು ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್. ಗೌರಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.