Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ | ನವೆಂಬರ್ 16 ರಿಂದ ಶ್ರೀ ಅಯ್ಯಪ್ಪ ಸ್ವಾಮಿ  ದೇವಸ್ಥಾನದಲ್ಲಿ 25 ನೇ  ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 13 : ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ  ಶ್ರೀ ಅಯ್ಯಪ್ಪ ಸ್ವಾಮಿ  ದೇವಸ್ಥಾನದಲ್ಲಿ ನವಂಬರ್ 16 ರಿಂದ ಜನವರಿ 13 ರವರೆಗೂ 25 ನೇ  ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ ನಡೆಯಲಿದೆ. ಈ 60 ದಿನಗಳ ಕಾಲ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಲೆ ಧರಿಸಿದ ಸ್ವಾಮಿ ಗಳಿಗೆ ಪ್ರತಿನಿತ್ಯ ಉಚಿತ ಅನ್ನದಾನ ಕಾರ್ಯಕ್ರಮ ನೆರವೇರಸಲಾಗುವುದು. 

ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 16  ಶನಿವಾರ ದಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಗಣ ಹೋಮ ಶ್ರೀ ಚಂಡಿಕಾ ಹೋಮ ಪೂಜಾ ಕಾರ್ಯಕ್ರಮ ನೆರವೇರಿ ಸಲ್ಲಾಗುವುದು. ಮಧ್ಯಾಹ್ನ 12:45 ಗಂಟೆಗೆ  ಪೂರ್ಣಾವತಿ ನಡೆಯುವುದು . ಹಾಗೂ ಅನ್ನದಾನದ ಕಾರ್ಯಕ್ರಮದ ಉದ್ಘಾಟನೆಯನ್ನು ಉದಯ ಶೆಟ್ಟಿ ವರ್ತಕರು ಆರ್ ಎಂ ಸಿ  ಯಾಡ  ಚಿತ್ರದುರ್ಗ  ಇದರ ಅಧ್ಯಕ್ಷತೆಯನ್ನು ಅರುಣ್ ಕುಮಾರ್  ಅಧ್ಯಕ್ಷರು  ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ .ಚಿತ್ರದುರ್ಗ ಇವರು ನೆರವೇರಿಸುವವರು.

18-12-2024   ಬುಧುವಾರ ರಂದು ಸಂಜೆ ಏಳು ಗಂಟೆಗೆ  18 ಮೆಟ್ಟಿಲುಗಳ ಪಡಿಪೂಜ ಕಾರ್ಯಕ್ರಮ ಇರುವುದು. 22-12-2024  ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ  ದೇವಸ್ಥಾನದ ಆವರಣದಲ್ಲಿ ಮಹಾ ಅನ್ನದಾನ ಕಾರ್ಯಕ್ರಮವಿರುತ್ತದೆ.

13-01-2025  ಸೋಮವಾರ ಸಂಜೆ 6:00ಗೆ ಶ್ರೀ ಅಯ್ಯಪ್ಪ ಸ್ವಾಮಿಯ  ದೇವರ ಆಭರಣ ಮೆರವಣಿಗೆ  ನಗರದಲ್ಲಿ ನೆರವೇರಿಸಲಾಗುವುದು. ದಿನಾಂಕ 14.01.2025  ಮಂಗಳವಾರ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಿಸಲಾಗುವುದು.  ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಕಲ ಭಕ್ತಾದಿಗಳು  ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ. ಅಧ್ಯಕ್ಷರು  ಶರಣ್ ಕುಮಾರ್ ಸ್ವಾಮಿ ಸೇವಾ ಟ್ರಸ್ಟ್. ಹಾಗೂ ದೇವಸ್ಥಾನದ ಕಾರ್ಯದರ್ಶಿಯಾದ ವೆಂಕಟೇಶ್  ಉಪಾಧ್ಯಕ್ಷರಾದ ಮಲ್ಲಿಕಾರ್ಜುನ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...