ಚಿತ್ರದುರ್ಗ | ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಜೂನ್.21 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು  ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಪ್ರ್ರಾಮುಖ್ಯತೆಯನ್ನು  ಕುರಿತು ಸಂಸ್ಥೆಯ ಕಾರ್ಯದರ್ಶಿಗಳಾದ ಬಿ. ವಿಜಯ ಕುಮಾರ್ ರವರು  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದು ವಿಶ್ವ ಮಟ್ಟದಲ್ಲಿ ಯೋಗ ದಿನಾಚರಣೆ ವಿಶೇಷ ದಿನವನ್ನಾಗಿ ಮಾಡುವಲ್ಲಿ ಭಾರತೀಯರಾದ ನಾವೆಲ್ಲರೂ ಅರ್ಹರು, ಅಲ್ಲದೇ  ಮಕ್ಕಳು ಯೋಗವನ್ನು  ಕೇವಲ ಈ ದಿನಕಷ್ಷೇ ಸೀಮಿತಗೊಳಿಸದೇ ವರ್ಷದ ಮುನ್ನೂರ ಅರವತ್ತು ದಿನಗಳಲ್ಲಿ  ಯೋಗದ ವಿವಿಧ ಆಸನಗಳಲ್ಲಿ ಸಕ್ರಿಯರಾಗುವುದರಿಂದ ನಿಮ್ಮ ಆರೋಗ್ಯ ಸುಧಾರಣೆಯಲ್ಲಿರುತ್ತದೆ, ಅಲ್ಲದೇ  ಕಲಿಕೆಗೂ ಪೂರಕವಾಗಿರುತ್ತದೆ. ಎಂದು ತಿಳಿಸಿದರು.

ಯೋಗ ದಿನದ ಅಂಗವಾಗಿ ಯೋಗ ಶಿಕ್ಷಕರಾದ ಮುರಳಿಯವರು ಮಕ್ಕಳಿಗೆ ಯೋಗ ತರಬೇತಿಯನ್ನು ನೀಡುವುದರ ಜೊತೆಗೆ ಯೋಗ ದಿನಾಚರಣೆಯ ಅಂಗವಾಗಿ  ವಿವಿಧ ಆಸನಗಳನ್ನು ಮಕ್ಕಳಿಂದ ಮಾಡಿಸುವುದರ ಮೂಲಕ ದಿನವನ್ನು ಯಶಸ್ವಿಗೊಳಿಸಿದರು. ಮಕ್ಕಳಿಗೆ ಕಳೆದ 3 ದಿನಗಳಿಂದ ತರಬೇತಿ ನೀಡಿದ ಯೋಗ ತರಬೇತುದಾರ ಮುರಳಿ ಅವರಿಗೆ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ ಕುಮಾರ್ ಅವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ  ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ ಎನ್.ಜಿ, ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ  ವೃಂದ, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಶಿಕ್ಷಕಿಯಾದ ಸುಚಿತಾ ಬಿ ಎಸ್ ಸ್ವಾಗತಿಸಿ, ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *