in

ಶಾಲಾ ಮಕ್ಕಳಿಗೆ ಉಡುಗೊರೆ ನೀಡಿ ಮಗಳ ಹುಟ್ಟು ಹಬ್ಬ ಆಚರಿಸಿದ ಚಿನ್ನೂಲಾದ್ರಿ ರೋಟರಿ ಕ್ಲಬ್‌ ಅಧ್ಯಕ್ಷ ಈ.ಅರುಣ್‌ಕುಮಾರ್‌

suddione whatsapp group join

ಚಿತ್ರದುರ್ಗ, (ಮಾ.24) :  ರೋಟರಿ ಕ್ಲಬ್‌ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ನಿರಂತವಾಗಿ ತೊಡಗುತ್ತಿದೆ. ಇಲ್ಲಿ ಅಧಿಕಾರ ಆಸೆ, ಸ್ವಾರ್ಥಕ್ಕಿಂತ ಸೇವೆ ಮಾಡುವುದು ಮುಖ್ಯವಾಗಿದೆ. ರೋಟರಿ ಕ್ಲಬ್‌ ಜಗತ್ತಿನ ಅತಿ ದೊಡ್ಡ ಸೇವಾ ಸಂಸ್ಥೆ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಈ ಅರುಣ್‌ಕುಮಾರ್‌ ಹೇಳಿದರು.

ನಗರದ ಜೆ.ಸಿ.ಆರ್. ಬಡಾವಣೆಯ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ಚಿನ್ನೂಲಾದ್ರಿ ರೋಟರಿ ಕ್ಲಬ್‌ ಅಧ್ಯಕ್ಷ ಈ.ಅರುಣ್‌ಕುಮಾರ್‌ ಮಗಳಾದ ಕುಮಾರಿ ಧನ್ವಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೆನ್ಸಿಲ್‌,ಬಣ್ಣದ ಪೆನ್ಸಿಲ್‌ ಸೆಟ್‌ಗಳನ್ನು ವಿತರಿಸಿ, ಸಿಹಿ ಹಂಚುವ ಮೂಲಕ ವಿಶಿಷ್ಠವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ರೋ ಶ್ರೀನಿವಾಸ್ ಮಳಲಿ, ಕ್ಲಬ್ ನ ಮಾರ್ಗದರ್ಶಕರಾದ ರೋ ಟಿ.ಕೆ. ನಾಗರಾಜ್ ಜಂಟಿ ಕಾರ್ಯದರ್ಶಿ ರೋ. ಶಂಕರಪ್ಪ, ಸದಸ್ಯರಾದ ರೋ. ಗುರುಮೂರ್ತಿ, ರೆಡ್ ಕ್ರಾಸ್ ನ ಕಾರ್ಯದರ್ಶಿ ಮಜಹರ್ ಉಲ್ಲಾ, ನಿವೃತ್ತ ತಾಲೂಕ್ ದೈಹಿಕ ಶಿಕ್ಷಣಧಿಕಾರಿಗಳಾದ ನೀಲಕಂಠಚಾರ್ಯ, ಮುಖ್ಯಶಿಕ್ಷಕರಾದ ಶಿವರಾಮ್ ರವರು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮಾನನಷ್ಟ ಮೊಕದ್ದಮೆ ಪ್ರಕರಣ : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹ

ರಾಹುಲ್ ಗಾಂಧಿಗೆ ಈ ಶಿಕ್ಷೆಯಿಂದ ಪಾರಾಗಲೂ ಏನು ದಾರಿ..? : ತಜ್ಞರು ಹೇಳೋದೇನು..?