ಕಾಯ್ದೆ ವಾಪಾಸ್ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಚೀನಾದೊಂದಿಗಿನ ಗಡಿ ವಿವಾದ ನೆನಪಿಸಿದ ರಾಹುಲ್ ಗಾಂಧಿ..!

ನವದೆಹಲಿ: ವರ್ಷದಿಂದ ಮಾಡಿದ ರೈತರ ಹೋರಾಟಕ್ಕೆ ಸದ್ಯ ಜಯ ಸಿಕ್ಕಿದ್ದು, ಮೂರು ಕೃಷಿ ಕಾಯ್ದೆಗಳನ್ನ ನರೇಂದ್ರ ಮೋದಿ ಸರ್ಕಾರ ವಾಪಾಸ್ ಪಡೆದಿದೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದರ ಜೊತೆಗೆ ಚೀನಾದೊಂದಿಗಿನ ಗಡಿ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚೀನಾ ಅತಿಕ್ರಮಣ ಮಾಡಿದೆ ಅಂತ ಒಪ್ಪಿಕೊಳ್ಳಿ ಎಂದಿದ್ದಾರೆ.

ಚೀನಾದೊಂದಿಗೆ ಇರುವ ಗಡಿ ವಿವಾದವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಚೀನಾ ನಮ್ಮ ದೇಶದ ಭಾಗವನ್ನು ಅತಿಕ್ರಮಣ ಮಾಡಿಕೊಂಡಿದೆ. ಚೀನಾ ವಿರುದ್ಧ ಕ್ರಮಕ್ಕೆ ಮುಂದಾಗದೆ ಪ್ರಾದೇಶಿಕತೆಯ ವಿಚಾರದಲ್ಲೂ ಕೇಂದ್ರ ರಾಜಿ ಮಾಡಿಕೊಳ್ಳುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ರಾಹುಲ್​ ಗಾಂಧಿ ಮಾಡಿದ್ದಾರೆ.

ಚೀನಾ ಕೇವಲ ಪೂರ್ವ ಲಡಾಖ್​​ನಲ್ಲಿ ಮಾತ್ರವಲ್ಲ, ಅರುಣಾಚಲ ಪ್ರದೇಶದಲ್ಲೂ ಕೂಡ ತನ್ನ ಉಪಟಳ ತೋರುತ್ತಿದೆ. ಅಲ್ಲಿ ಹೊಸಹೊಸ ಹಳ್ಳಿಗಳನ್ನೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಕೂಡ ಆಗಾಗ ವರದಿಯಾಗುತ್ತಿದೆ. ಕಳೆದ ವರ್ಷ ಜೂನ್​​ನಲ್ಲಿ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದ ಪರಿಣಾಮ ಸುಮರು 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *